ಲಡಾಖ್ ನಲ್ಲಿ ಇನ್ನಿಬ್ಬರಲ್ಲಿ ಕರೋನವೈರಸ್‍ ಪತ್ತೆ: ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ

ಲೇಹ್, ಮಾರ್ಚ್ 20,ಲಡಾಖ್‌ನಲ್ಲಿ ಇನ್ನೂ ಇಬ್ಬರಲ್ಲಿ  ಕರೋನವೈರಸ್‌ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 10 ಕ್ಕೆ ಏರಿದೆ. ಗುರುವಾರ ಇನ್ನೂ ಕೆಲವು ಮಾದರಿಗಳ ಪರಿಕ್ಷಾ ವರದಿಗಳನ್ನು ಪಡೆಯಲಾಗಿದ್ದು, ಇವುಗಳ ಪೈಕಿ ಎರಡು ಮಾದರಿಗಳು ದೃಢಪಟ್ಟಿವೆ ಎಂದು ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ. ಸೋಂಕಿತ ವ್ಯಕ್ತಿಗಳು ಸಂಪರ್ಕ ಹೊಂದಿರುವ ವ್ಯಕ್ತಿಗಳು ಮತ್ತು ಸಂಬಂಧಿಗಳನ್ನು ಸಂಪರ್ಕತಡೆಯಲ್ಲಿ ಇರಿಸಲಾಗಿದೆ. ಅವರೆಲ್ಲರನ್ನು ಸದ್ಯ ಈಗ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಹೊಸ ಎರಡು ಪ್ರಕರಣಗಳು ಸೇರಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 10 ಕ್ಕೆ ಏರಿದೆ ಎಂದು ಮೂಲಗಳು ಹೇಳಿವೆ.ಸೋಂಕಿತ ಹತ್ತು ಜನರ ಪೈಕಿ ಒಬ್ಬ ಸೈನಿಕ ಸೇರಿದ್ದು, ಭಾರತೀಯ ಸೇನೆಯಲ್ಲಿ ಮೊದಲ ಕರೋನವೈರಸ್ ಪ್ರಕರಣ ಇದಾಗಿದೆ. ಲಡಾಖ್ ಸ್ಕೌಟ್ಸ್ ನ ಈ ಯೋಧನ ಜೊತೆ ಸಂಪರ್ಕದಲ್ಲಿದ್ದ ಎಲ್ಲ ಸೈನಿಕರನ್ನು ಸೇನೆ ಸಂಪರ್ಕ ತಡೆಯಲ್ಲಿರಿಸಿದೆ. 34 ವರ್ಷದ ಸೈನಿಕನಿಗೆ ಸೋಂಕು ಇರುವುದು ಲೇಹ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಲೇಹ್‌ನ ಚುಹೋಟ್ ಗ್ರಾಮದ ನಿವಾಸಿಯಾದ ಸೈನಿಕ, ಫೆಬ್ರವರಿ 20 ರಂದು ಏರ್ ಇಂಡಿಯಾ ವಿಮಾನದ ಮೂಲಕ ಇರಾನ್‌ ನಿಂದ  ಯಾತ್ರೆ ಮುಗಿಸಿ ಹಿಂದಿರುಗಿದ ಕೊರೊನವೈರಸ್ ಸೋಂಕಿತ ತನ್ನ ತಂದೆಯೊಂದಿಗೆ ಸಂಪರ್ಕದಲ್ಲಿದ್ದ.