ಕೊಪ್ಪಳ 17: ಜಿಲ್ಲೆಯಲ್ಲಿ ಗುಳೆ ಪ್ರಮಾಣವನ್ನು ತಗ್ಗಿಸಲು ಅಧಿಕ ಮಾನವ ದಿನಗಳನ್ನು ಸೃಷ್ಟಿಸಿ, ಗುಳೆ ಹೋಗುವ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತವಾಗದಂತೆ ಕ್ರಮ ವಹಿಸಿ ಎಂದು ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಅಧ್ಯಕ್ಷ ಕರಡಿ ಸಂಗಣ್ಣ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು (ಜ. 17) ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಂಗಾವತಿಯ ಮಲ್ಲಾಪುರ ಮತ್ತು ಕುಣಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಳೆ ಹೋಗುವ ಕುರಿತು ದಿನ ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ವಸ್ತು ಸ್ಥಿತಿ ಪರಿಶೀಲಿಸಲು ಸೂಚಿಸಲಾಗಿತ್ತು ಅದರನುಸಾರ ಗುಳೆ ಪ್ರಮಾಣ ಮತ್ತು ಗುಳೆ ಹೋಗುವ ಕುಟುಂಬದ ಮಕ್ಕಳ ಶಿಕ್ಷಣದ ಕುರಿತು ವಿವರವಾದ ಮಾಹಿತಿ ನೀಡಿ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಗುಳೆ ಹೋಗುವ ಕುಟುಂಬದ ಮಕ್ಕಳ ಸಂಖ್ಯೆ ಹಾಗೂ ಆ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ನೀಡಿ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಅದರಂತೆ ಗುಳೆಯನ್ನು ತಪ್ಪಿಸಲು ಗ್ರಾಮದ ಜನರಿಗೆ ಉದ್ಯೋಗ ನೀಡಲು ಮಾನವ ದಿನಗಳನ್ನು ಸೃಷ್ಟಿಸಿ. ಹಾಗೂ ಮಾನವ ದಿನಗಳ ಮೂಲಕ ಉದ್ಯೋಗ ನೀಡುವ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಗುಳೆಯನ್ನು ತಪ್ಪಿಸಿ ಎಂದು ತಾಲ್ಲೂಕು ಪಂಚಾಯತ ಮುಖ್ಯಾಧಿಕಾರಿಗೆ ತಿಳಿಸಿದರು.
ಈ ಕುರಿತು ಜಿ.ಪಂ ಉಪಕಾರ್ಯದರ್ಶಿ ಎನ್.ಕೆ. ತೊರವಿ ಮಾಹಿತಿ ನೀಡುತ್ತಾ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 17,490 ಮತ್ತು ಕುಣಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 9,430 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಜಿಲ್ಲೆಯಾದ್ಯಂತ ಇದುವರೆಗೂ ಒಟ್ಟು 42,25,628 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಗಂಗಾವತಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬೇಡಿಕೆಗೆ ತಕ್ಕಂತೆ ವಿವಿಧ ಯೋಜನೆಗಳಡಿಯಲ್ಲಿ ಉದ್ಯೋಗ ಚೀಟಿಗಳನ್ನು ವಿತರಿಸಿ, ಕೂಲಿಕಾರರಿಗೆ ಕೆಲಸ ಒದಗಿಸಿ ಉತ್ತಮ ಮಾನವ ದಿನಗಳನ್ನು ಸೃಜಿಸಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಹನುಮನಾಳದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ನಿರ್ಮಾಣಕ್ಕೆ ನಿವೇಶನದಲ್ಲಿನ ತಾಂತ್ರಿಕ ತೊಂದರೆ ಕುರಿತು ಪರಿಶೀಲಿಸಿ ವರದಿ ನೀಡಿ. ಅಗತ್ಯವಿದ್ದಲ್ಲಿ ಬೇರೆ ನಿವೇಶನವನ್ನು ಒದಗಿಸಲಾಗುವುದು. ಕೊಪ್ಪಳ ನಗರದ 100 ಹಾಸಿಗೆಗಳ ಎಂ.ಸಿ.ಎಚ್ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿನ ಅನೈರ್ಮಲ್ಯದ ಕುರಿತು ದೂರುಗಳು ಬರುತ್ತಿದ್ದು, ವೈದ್ಯೇತರ ಡಿ-ದಜರ್ೆ ಸಿಬ್ಬಂದಿಯನ್ನು ನಿಯೋಜಿಸಿ ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡಿ. ಆಸ್ಪತ್ರೆಗೆ ಬಂದವರು ಗುಣಮುಖರಾಗಬೇಕೆ ಹೊರತು ಖಾಯಿಲೆಗೆ ತುತ್ತಾಗಬಾರದು. ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಅಂತರ್ ಜಾತಿ ವಿವಾಹಕ್ಕೆ ಸಕರ್ಾರ ನೀಡುವ ಪ್ರೋತ್ಸಾಹ ಧನದ ಕುರಿತು ಮಾಹಿತಿ ಕೇಳಿದ ಅಧ್ಯಕ್ಷರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡುತ್ತಾ ಅಂತರ್ ಜಾತಿ ವಿವಾಹಿತ ದಂಪತಿಗಳು ವಿವಾಹ ದಿನದಿಂದ 18 ತಿಂಗಳುಗಳೊಳಗಾಗಿ ಆನ್ಲೈನ್ನಲ್ಲಿ ಅಜರ್ಿ ಸಲ್ಲಿಸಿದರೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಹೇಳಿದರು. 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ವಿದ್ಯಾಥರ್ಿ ವೇತನಕ್ಕಾಗಿ 2018-19 ನೇ ಸಾಲಿಗೆ 11.70 ಲಕ್ಷ ರೂ. ಗಳನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು, ಅನುದಾನವನ್ನು 5,591 ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೂಕನಪಳ್ಳಿಯಲ್ಲಿ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಿಮರ್ಿಸಲಾಗಿರುವ ಅಧಿಕೃತ ಮಾರುಕಟ್ಟೆಯಲ್ಲಿ ಪ್ರತಿ ಶುಕ್ರವಾರ ಕುರಿ ಮತ್ತು ಮೇಕೆ ವಾರದ ಸಂತೆ ನಡೆಯಬೇಕು. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಕೂಕನಪಳ್ಳಿಯಲ್ಲಿಯೇ ಅಧಿಕೃತ ಮಾರುಕಟ್ಟೆಯನ್ನು ಆರಂಭಿಸುವಂತೆ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿದರ್ೇಶಕರಿಗೆ ಸೂಚನೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಯೋಜನೆಯಾದ ರಾಷ್ಟ್ರೀಯ ಕೃತಕ ಗರ್ಭಧಾರಣೆ ಯೋಜನೆಯಲ್ಲಿ ಹಸು ಮತ್ತು ಎಮ್ಮೆಗಳ ಫಲವಂತಿಕೆಯ ಸರಾಸರಿಯಲ್ಲಿ ಪ್ರಗತಿ ಕಾಣುತ್ತಿಲ್ಲ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ. ಗುಣಮಟ್ಟದ ತಳಿಯ ವೀರ್ಯಗಳನ್ನು ಬಳಸಿ ಹಸು ಹಾಗೂ ಎಮ್ಮೆಗಳ ಕೃತಕ ಗರ್ಭಧಾರಣೆಗೆ ಕ್ರಮ ಕೈಗೊಳ್ಳಿ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿದರ್ೇಶಕರಿಗೆ ಹೇಳಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ 331 ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಕಾಮಗಾರಿಗಳು ವಿಳಂಬವಾಗುತ್ತಿದ್ದು ಅವುಗಳನ್ನು ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸಿ ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು.
ಕಾರಟಗಿ ವ್ಯಾಪ್ತಿಯ ರೈತರಿಗೆ ಉತ್ತಮ ರೈಸ್ ಟೆಕ್ನಾಲಜಿ ಪಾರ್ಕ ನಿಮರ್ಾಣದ ಯೋಜನೆ ಪ್ರಗತಿಯಲ್ಲಿದೆ. ಇಲ್ಲಿ ಉತ್ತಮ ಸಿ.ಸಿ ರಸ್ತೆ, ಒಳಚರಂಡಿ, ಟೆಂಡರ್ ಹಾಲ್, ಶೌಚಾಲಯಗಳು, ಬೀದಿ ದೀಪಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಕ್ಲೀನಿಂಗ್ ಘಟಕಗಳು, ಸಂಯುಕ್ತ ಭವನ, ಇಂಡಸ್ಟ್ರಿಯಲ್ ನಿವೇಶನಗಳು ಸೇರಿದಂತೆ ಉತ್ತಮ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮತ್ತು ಉನ್ನತ ಮೂಲ ಸೌಕರ್ಯಗಳ ರೈಸ್ ಪಾಕರ್್ ಆಗಲಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿದರ್ೇಶಕರು ಮಾಹಿತಿ ನೀಡಿದರು.
2019-20ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆ ಮತ್ತು ಸ್ವಚ್ಛ ಭಾರತ ಮತ್ತು ನರೇಗಾ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ 386 ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದು 336 ಕಾಮಗಾರಿ ಪ್ರಾರಂಭವಾಗಿವೆ. 14 ಕಾಮಗಾರಿಗಳು ಆರಂಭದ ಹಂತದಲ್ಲಿವೆ. ನವಲಿಯಲ್ಲಿ ಆಯ್ಕೆ ಮಾಡಿಕೊಂಡ 16 ಕಾಮಗಾರಿಗಳಲ್ಲಿ 14 ಪೂರ್ಣವಾಗಿವೆ. 2 ಬಾಕಿ ಉಳಿದಿವೆ ಎಂದು ಜಿ.ಪಂ. ಉಪ ಕಾರ್ಯದಶರ್ಿ ಮಾಹಿತಿ ನೀಡಿದರು.
ಸಭೆಯಲ್ಲಿ ಇತರೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ರಾಜ್ಯ ನಿರ್ದೇಶಕರಾದ ಶಿವಶಂಕರ, ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ದಿಶಾ ಸಮಿತಿಗೆ ಹೊಸದಾಗಿ ನೇಮಕಗೊಂಡ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.