ಕುಲಗೋಡದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಅವರಿಗೆ ಸತ್ಕಾರ

DCC Bank Chairman Appasaba Kulgode felicitated at Kulgode

 ಕುಲಗೋಡದಲ್ಲಿ  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಅವರಿಗೆ ಸತ್ಕಾರ 

ಮೂಡಲಗಿ 04: ಜನರ ಆರ್ಥಿಕ ಅಭಿವೃದ್ದಿ, ರೈತರ ಹಿತರಕ್ಷಣೆ ಮಡುತ್ತಿರುವ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷನಾಗಿರುವುದು ನನ್ನ ಭಾಗ್ಯ ಎಂದು  ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಹೇಳಿದರು. 

ಅವರು ತಾಲೂಕಿನ ಕುಲಗೋಡ  ಗ್ರಾಮದ ಆರಾಧ್ಯ ದೈವ ಬಲಭೀಮ ದೇವಸ್ಥಾನಕ್ಕೆ ಬೇಟ್ಟಿ ನೀಡಿ ನಂತರ ಗ್ರಾಪಂ ಕಾರ್ಯಲಯದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿ  ಕುಲಗೋಡದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸನ್ 23-24ನೇ ಸಾಲಿನ ಆರ್ಥಿಕ ಸ್ಥಿತಿ ಮತ್ತು ಪ್ರಗತಿಗೆ ತಾಲೂಕ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿ ಪಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರುವ ದಿನಗಳಲ್ಲಿ ಕುಲಗೋಡ ಡಿಸಿಸಿ ಬ್ಯಾಂಕಿಗೆ ಹೆಚ್ಚಿನ ಸಹಾಯ ಸಹಕಾರ ಮಾಡುವದಾಗಿ ಹೇಳಿದರು. 

     ನೂತನ  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಅವರನ್ನು ಪಿ.ಕೆ.ಪಿ.ಎಸ್ ಮತ್ತು ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ  ಮಾಳಿ ಸಮಾಜ ಬಾಂದವರು, ಡಿ.ಎಸ್‌.ಎಸ್ ಸಂಘಟನೆ ಪದಾಧಿಕಾರಿಗಳು. ಕರೆಮ್ಮಾದೇವಿ ಜಾತ್ರಾ ಕಮಿಟಿ ಹಿರಿಯರು ಸತ್ಕರಿಸಿದರು. 

ಬಲಭೀಮ ದೇವಸ್ಥಾನ. ಗ್ರಾಪಂ ಹಾಗೂ ಪಿ.ಕೆ.ಪಿ.ಎಸ್ ಕಛೇರಿ. ಶ್ರೀಕರೆಮ್ಮಾದೇವಿ ದೇವಸ್ಥಾನಕ್ಕೆ ಬೇಟಿ ನೀಡಿದರು.       

   ತಾಲ್ಲೂಕು  ಪಂಚಾಯ್ತಿ ಮಾಜಿ ಸದಸ್ಯ ಸುಭಾಷ  ವಂಟಗೋಡಿ  ಮಾತನಾಡಿ, ರೈತರಿಗೆ ಸರಿಯಾಗಿ ಸಾಲ  ಸೌಲಭ್ಯ ನೀಡಬೇಕು  ಮತ್ತು  ಬಿಡಿಸಿಸಿ ಬ್ಯಾಂಕನಿಂದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೆಚ್ಚಿನ  ಸಾಲ  ಸೌಲಭ್ಯ  ನೀಡಬೇಕೆಂದು ಬಿಡಿಸಿಸಿ  ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.  

     ಈ ಸಮಯದಲ್ಲಿ ಟಿ.ಎ.ಪಿ.ಸಿ.ಎಮ್‌.ಎಸ್  ಅಧ್ಯಕ್ಷ  ಅಶೋಕ ನಾಯಿಕ,  ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರು, ಭೀಮಶಿ ಪೂಜೇರಿ, ಮುರಿಗೆಪ್ಪ ಯಕ್ಸಂಬಿ, ದತ್ತು ಕುಲಕರ್ಣಿ, ಈರಣ್ಣ ಸಸಾಲಟ್ಟಿ, ಗ್ರಾಪಂ  ಸದಸ್ಯರಾದ  ಗೋಪಾಲ ತಿಪ್ಪಿಮನಿ, ಬಸು ಯರಗಟ್ಟಿ, ಸತೀಶ ವಂಟಗೋಡಿ, ನಾಗೇಶ ಬಂಡಿವಡ್ಡರ, ಪಿ.ಡಿ.ಓ ಸದಾಶಿವ ದೇವರ, ಪಿಕೆಪಿಎಸ್ ಸದಸ್ಯರಾದ ಹಣಮಂತ ಚನ್ನಾಳ, ಸೊಮಲಿಂಗ ಮಿಕಲಿ, ಬಸವಣ್ಣೆಪ್ಪ ತಿಪ್ಪಿಮನಿ, ರಾಮಕೃಷ್ಣ ಮ್ಯಾಗೋಟಿ, ಲಕ್ಷ್ಮಣ ತಿಪ್ಪಿಮನಿ, ರಾಜು ಕೊಪ್ಪದ, ಜಗದೀಶ ಬೆಳಗಲಿ, ಲಕ್ಷ್ಮಣ  ನಂದಿ, ವಿಶ್ವನಾಥ ಯಕ್ಸಂಬಿ ಗ್ರಾಮಸ್ಥರು ಹಾಗು  ಸಿಬ್ಬಂದಿ  ವರ್ಗದವರು  ಉಪಸ್ಥಿತರಿದ್ದರು.