ದಲಿತ ಸಮುದಾಯದ ತಿಂಗಳ ಸಭೆ ಯಶಸ್ವಿ

Dalit community month meeting was a success

ಯಮಕನಮರಡಿ 13: ಸ್ಥಳೀಯ ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಗ್ರಾಮಗಳ ದಲಿತ ಸಮುದಾಯದ ತಿಂಗಳ ಸಭೆೆಯನ್ನು ದಿ.12 ರಂದು ಪೋಲಿಸ ಠಾಣಾ ಆವರಣದಲ್ಲಿ ಕರೆಯಲಾಯಿತು. ಸಭೆೆಯಲ್ಲಿ ದಲಿತ ಸಮುದಾಯದ ವಿವಿಧ ಕುಂದು ಕೊರತೆಗಳನ್ನು ಚರ್ಚಿಸಿ ಮನವಿ ಪತ್ರಗಳನ್ನು ಸ್ವಿಕರಿಸಲಾಯಿತು.  

ಸಭೆಯ ಅಧ್ಯಕ್ಷತೆಯನ್ನು ಠಾಣಾ ಪಿ ಎಸ್ ಐ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮುಖ್ಯ ಪೇದೆ ಅರಬಳ್ಳಿ ಮಾತನಾಡಿದರು.