ದಿ, 21 ರಂದು ಕೊಪ್ಪಳದಲ್ಲಿ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಮೆಡಿಟೇಶನ್ ಕಾರ್ಯಕ್ರಮ

Dhyana Meditation Program for World Unity and Faith in Koppal on the 21st

ದಿ, 21 ರಂದು ಕೊಪ್ಪಳದಲ್ಲಿ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಮೆಡಿಟೇಶನ್ ಕಾರ್ಯಕ್ರಮ

ಕೊಪ್ಪಳ  18:  ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ ಹಾಗೂ ಪ್ರೇರಣಾದಾಯಿ ಸಂದೇಶ ಹಾಗೂ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಮೆಡಿಟೇಶನ್ ಇದರ ಭವ್ಯ ಉದ್ಘಾಟನೆ ಕಾರ್ಯಕ್ರಮ ಇದೆ ದಿ, 21ರ ಬುಧವಾರ ಸಂಜೆ 5:30 ಗಂಟೆಗೆ ಕೊಪ್ಪಳ ನಗರದ ದೇವರಾಜ ಅರಸ್ ಕಾಲೋನಿಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು ಬ್ರಹ್ಮಕುಮಾರಿಸ್ ರವರ 2025 26ನೇ ಸಾಲಿನ ಸೇವಾ ಯೋಜನೆ ಅಡಿಯಲ್ಲಿ ಅಬು ಪರ್ವತದ ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿ ಪೂಜ್ಯನೀಯ ರಾಜಯೋಗಿನಿ ಬಿಕೆ ,ಸುದೇಶ್ ದೀ ದೀ ಯವರ ಘನ ಉಪಸ್ಥಿತಿಯಲ್ಲಿ ಧ್ಯಾನ ಮೆಡಿಟೇಶನ್ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರಾದ ಕೊಪ್ಪಳ ಬ್ರಹ್ಮಕುಮಾರಿಸ್ ಈಶ್ವರಿ ವಿಶ್ವವಿದ್ಯಾಲಯದ ಪ್ರಜಾಪಿತ ಬ್ರಹ್ಮಕುಮಾರಿ ಯೋಗಿನಿ ಅಕ್ಕ ನವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.