ಬಳ್ಳಾರಿ 22 : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರ 25ನೇ ಪುಣ್ಯಸ್ಮರಣೆಯನ್ನು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸುವ ಮೂಲಕ, ಗುರುವಾರ ಆಚರಿಸಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿರುವ ಯಶವಂತರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ, ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು, ಉಪಾಧ್ಯಕ್ಷರಗಳಾದ ಎಸ್. ದೊಡ್ಡನಗೌಡ, ಸೊಂತ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಚೆನ್ನಪ್ಪ, ಕೆ .ಶ್ಯಾಮ್, ಉಚಿತ ಆಸ್ಪತ್ರೆ ಚೇರ್ಮನ್, ಸುರೇಂದ್ರ ಕುಮಾರ್ ಬಾಫ್ನಾ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ಇರುವ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಚಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದವರಿಗೆ ದಿವಂಗತ ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಯನ್ನು ಬಿಸ್ಕೇಟ್, ಹಾಲು - ಹಣ್ಣುಗಳನ್ನು ವಿತರಣೆ ಮಾಡಲಾಯಿತು