ಬಡಮಹಿಳೆಯರಿಗೆ ಸೌಖ್ಯ ಬೆಳಕು ಸಂಸ್ಥೆಯಿಂದ ಆಹಾರದ ಕಿಟ್ ವಿತರಣೆ

ಲೋಕದರ್ಶನವರದಿ

ಹರಪನಹಳ್ಳಿ23: ದಮನಿತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವಿರತವಾಗಿ ಶ್ರಮಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ ಹೇಳಿದರು. ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಜೀಂ ಪ್ರೇಮ್ಜೀ ಪೌಂಡೇಶನ್ ಮತ್ತು ಹರಪನಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೇತೃತ್ವದಲ್ಲಿ ಬಳ್ಳಾರಿಯ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯಿಂದ  ದಮನಿತ ಮಹಿಳೆಯರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ಒಬ್ಬ ಕಷ್ಟದಲ್ಲಿದಾಗ ಮತ್ತೊಬ್ಬ ನೆರವಿನ ಹಸ್ತ ಚಾಚುವುದು ಮಾನವೀಯ ಗುಣವಾಗಿದೆ. ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಆದರೆ ಕೊರೊನಾ ಸೋಂಕಿನಿಂದ ಪಾರಾಗಲು ಸಕರ್ಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯ ಎ.ಐ.ಟಿ.ಸಿ ಆಪ್ತ ಸಮಾಲೋಚಕ ಮಲ್ಲಿಕಾಜರ್ುನ ಮಾತನಾಡಿ, ದಮನಿತ ಮಹಿಳೆಯರಿಗೆ ಮನೆ, ನಿವೇಶನ, ಪಡಿತರ ಚೀಟಿ, ಆಧಾರ್ ಕಾರ್ಡ ಮತ್ತು ಪ್ರತ್ಯೇಕ ಯೋಜನೆಗಳಾದ ಚೇತನ ಯೋಜನೆ, ಉದ್ಯೋಗಿನಿ, ಕಿರುಸಾಲ ಯೋಜನೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ನಿಜವಾಗಿಯೂ ಅರ್ಹರಿಗೆ ಸಕರ್ಾರದ ಸೌಲಭ್ಯಗಳು ತಲುಪಿದಾಗ ಮಾತ್ರ ಯೋಜನೆಗಳು ಸಫಲವಾಗಲು ಸಾಧ್ಯ ಎಂದು ತಿಳಿಸಿದರು. ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಸಲಾಂ ಮಾತನಾಡಿ, ಹರಪನಹಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಒಟ್ಟು 280 ದಮನಿತ ಮಹಿಳೆಯರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದ್ದು, ಈ ಆಹಾರ ಕಿಟ್ನಲ್ಲಿ 1-ಲೀಟರ್ ಎಣ್ಣೆ, 4-ಕೆಜಿ ಗೋಧಿ ಹಿಟ್ಟು, 2-ಕೆಜಿ ತೋಗರಿಬೆಳೆ, 2-ಸಂತೂರು ಸೋಪು, 2-ಶಶಿ ಬಟ್ಟೆಸೋಪು, ಉಪ್ಪು, ಜೀರಿಗೆ, ಅರಿಶಿಣ ಪುಡಿ, ಸಾಸಿವೆ, ಕಾರಪುಡಿಒಳಗೊಂಡಂತೆ ಒಟ್ಟು 14 ವಿಧದ ಆಹಾರ ಕಿಟ್ ದಮನಿತಮಹಿಳೆಯರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ವೆಂಕಟೇಶ್ ಬಾಗಲಾರ್, ಡಾ.ಶಂಕರ್ನಾಯ್ಕ, ನಾಗರಾಜ, ಸೌಖ್ಯ ಬೆಳಕು ಸಂಸ್ಥೆಯ ವ್ಯವಸ್ಥಾಪಕರಾದ ಲಕ್ಷ್ಮೀನರಸಮ್ಮ, ಆಪ್ತಸಮಾಲೋಚಕ ಬಿ.ರವಿಕುಮಾರ್, ಒ.ಆರ್.ಡಬ್ಲ್ಯೂ, ಸಲ್ಮಾ,ಕೆ.ರೂಪ, ಉಲ್ಲಾಸಿನಿ ಇತರರಿದ್ದರು.