ಧಾರವಾಡ 29: ಆರು, ಹತ್ತು ಮತ್ತು ಹದಿನಾಲ್ಕು ವಾರದೊಳಗಿನ ಪ್ರತಿ ಮಗುವಿಗೆ ಉಳಿದ ಲಸಿಕೆಗಳ ಜೊತೆಗೆ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ಹಾಕಿಸಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಗಿರಿಧರ ಕುಕನೂರ ಹೇಳಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಆರಂಭಿಸಿರುವ ರೋಟಾ ವೈರಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಬರುವ ವಿವಿಧ ರೀತಿಯ ಭೇದಿಗಳಲ್ಲಿ ಶೇ. 40 ರಷ್ಟು ಭೇದಿಗಳು ರೋಟಾ ವೈರಸ್ನಿಂದ ಉಂಟಾಗುತ್ತದೆ. ಆದ್ದರಿಂದ ತಾಯಂದಿರು ಮಗುವಿಗೆ ನಿಯಮಾನುಸಾರ ಹಾಕುವ ವಿವಿಧ ರೀತಿಯ ಲಸಿಕೆಗಳೊಂದಿಗೆ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ಮೂರುಸಲ ಹಾಕಿಸಬೇಕು. ಪಾಲಕರು ಅಥವಾ ತಾಯಂದಿರು ತಮ್ಮ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ವೈದ್ಯರಾದ ಡಾ:ಟಿ.ಎ. ಶೇಪೂರ, ಡಾ: ಕೆ.ವಿ. ಅಚ್ಯುತ್, ಡಾ: ಎಸ್.ಟಿ. ಸ್ವಾಮಿ, ಡಾ:ಸಿ.ಬಿ. ನಾಡಗೌಡ ಸೇರಿದಂತೆ ವಿವಿಧ ಶಿಶುವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾಥರ್ಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.