ಡಾ. ಬಿ.ಎಸ್.ಭಜಂತ್ರಿಗೆ ಪ್ರಶಸ್ತಿ ಪ್ರದಾನ

ಧಾರವಾಡ 17: ಬೆಂಗಳೂರಿನ ಜಾಗೃತಿ ವೇದಿಕೆ ಮತ್ತು ಗೋವಾದ ಕರ್ಮಭೂಮಿ ಕನ್ನಡ ಸಂಘವು ಜೂನ್ 16ರ ಭಾನುವಾರದಂದು ಜಂಟಿಯಾಗಿ ಗೋವಾದಲ್ಲಿ ಆಯೋಜಿಸಿದ 11ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಬಿ.ಎಸ್.ಭಜಂತ್ರಿ ಅವರಿಗೆ 'ಕರುನಾಡ ಪದ್ಮಶ್ರೀ' ಪ್ರಶಸ್ತಿಯನ್ನು ಹುಕ್ಕೇರಿಯ ಚಂದ್ರಕಾಂತ ಶಿವಾಚಾರ್ಯ ಸ್ವಾಮಿಗಳು ಪ್ರದಾನ ಮಾಡಿದರು. 11ನೇ ಕನ್ನಡಿಗರ ಸಾಂಸ್ಕ್ರತಿಕ ಸಮ್ಮೇಳನದ ಸಭಾಧ್ಯಕ್ಷರಾದ ಹಿರಿಯ ಪತ್ರಕರ್ತ ವಿ.ಆರ್. ಪಾಟೀಲ ಸೇರದಿಂತ ಜಾಗೃತ ವೇದಿಕೆ ಮತ್ತು      ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಹಾಜರಿದ್ದರು.