ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಕರೆ: ಡಾ. ಕೊಕ್ಕನವರ

Dr. Kokkanavara calls on students to develop self-confidence

ಮೂಡಲಗಿ 17: ಸ್ಪರ್ಧಾತ್ಮಕವಾದ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು, ಬೆಳೆಸಿಕೊಳ್ಳುವ ಅಗತ್ಯತೆ ತುಂಬಾ ಇದೆ. ಎಂದು ಡಾ. ವಾಯ್‌.ವಾಯ್‌.ಕೊಕ್ಕವನರ ಕನ್ನಡ ಸಹ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಾಲೇಜು ಜಮಖಂಡಿ  ಇವರು ತಿಳಿಸಿದರು. 

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್‌. ಕ್ಯೂ. ಎ. ಸಿ. ಅಡಿಯಲ್ಲಿ,  ಸಾಂಸ್ಕೃತಿಕ, ಕ್ರೀಡೆ, ಎನ್‌.ಎಸ್‌.ಎಸ್‌. ಇನ್ನಿತರ ವಿಭಾಗಗಳ   ವತಿಯಿಂದ   ಹಮ್ಮಿಕೊಂಡಿದ್ದ 2024-25 ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌.ಎಸ್‌.ಎಸ್‌. ದಿ. ಭಾರತ ಸ್ಕೌಟ್ಸ್‌ ್ಘ ಗೈಡ್ಸ್‌. ಯುವ ರೆಡ್ ಕ್ರಾಸ್ ಇನ್ನಿತರ ಘಟಕಗಳ ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ  “ಸ್ಪರ್ಧಾತ್ಮಕವಾದ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು, ಸಮಯಪಾಲನೆಯನ್ನು, ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ತಂದೆ-ತಾಯಿಗೆ, ಗುರುಗಳಿಗೆ, ಸಮಾಜಕ್ಕೆ ಋಣಿಯಾಗಬೇಕೆಂದು” ಎಂದು ಕರೆ ನೀಡಿದರು. ಅಲ್ಲದೇ ತಮ್ಮಗಾಯನದ ಮೂಲಕ ರಂಜಿಸಿದರು. 

ಪ್ರಾಂಶುಪಾಲರಾದ ಪ್ರೊ. ಮಹೇಶ ವಾಯ್‌. ಕಂಬಾರ  ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಏಕಾಗ್ರತೆಯ ಓದಿನ ಕಡೆಗೆ ಗಮನಕೊಟ್ಟು ತಮ್ಮ ಬದುಕಿನಲ್ಲಿ ಒಳ್ಳೆಯ ಅವಕಾಶಗಳನ್ನು ನಿರ್ಮಾಣಮಾಡಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಹಿಂದಿನ ವರ್ಷದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಬಿ.ಎಸ್‌.ಡಬ್ಲ್ಯೂ. ವಿಭಾಗದಲ್ಲಿ ಮೊದಲ ರಾ​‍್ಯಂಕ ಪಡೆದ ಶಿಲ್ಪಾ ಉಪ್ಪಿನ, ಎರಡನೆಯ ರಾ​‍್ಯಂಕ ಪಡೆದ ಶಿಲ್ಪಾ ವಡಕಿ, ಬಿ.ಎ. ವಿಭಾಗದಲ್ಲಿ ನಾಲ್ಕನೆಯ ರಾ​‍್ಯಂಕ ಪಡೆದ ಅರ​‍್ಿತಾ ಮಳವಾಡ ಹಾಗೂ ಭಾರತೀಯ ಖೋ.ಖೋ. ತಂಡದಲ್ಲಿ ಸ್ಥಾನ ಪಡೆದು ನೇಪಾಳದಲ್ಲಿ ಜರುಗಿದ ಅಂತಾರಾಷ್ಟ್ರೀಯ ಪಂದ್ಯವಳಿಯಲ್ಲಿ ಚಿನ್ನದ ಪದಕ ಪಡೆದ ಬಿ.ಎ. ಎರಡನೆಯ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಚಂದ್ರಕಾಂತ ಯಡ್ರಾಂವಿ, ಹಾಗೂ ಕೆಸೆಟ್‌. ಪರೀಕ್ಷೆ ಪಾಸು ಮಾಡಿದ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸತ್ಕರಿಲಾಯಿತು.  

ಕಾರ್ಯಕ್ರಮದಲ್ಲಿ ಪ್ರೊ. ಚೇತನರಾಜ್ ಪ್ರಾಸ್ತಾವಿಕ ಮಾತನಾಡಿದರು, ಕುಮಾರಿಯರಾದ ಕು. ಜಾನು ಕುರನಿಂಗ ಹಾಗೂ ಕು. ಸುಪ್ರತಾ ನಾವಿ ಸ್ವಾಗತಿಸಿದರು, ಪ್ರೊ. ಶಿವಾನಂದ ಚಂಡಕೆ ವರದಿ ವಾಚಿಸಿದರು, ಕು. ಶಂಕರಯ್ಯಾ ಬೆಡಸೂರಮಠ ವಂದಿಸಿದರು ಕು. ಸಾಕ್ಷಿ ಹೊಸೂರ ಹಾಗೂ ಕು. ವಿದ್ಯಾ ಸಾಯನ್ನವರ ವಂದಿಸಿದರು.