ಲೋಕದರ್ಶನ ವರದಿ
ಕೊಪ್ಪಳ 18: 'ಕಾವ್ಯಾನಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದಿರುವ ಡಾ.ಸಿದ್ಧಯ್ಯ ಪುರಾಣಿಕರು ಪರಿಶುದ್ಧ ಸಾಂಸ್ಕೃತಿಕ ಮನಸ್ಸಿನಿಂದ ತುಂಬಿ ತುಳುಕುತ್ತಿದ್ದ ಅಪರೂಪದ ಸಾಹಿತಿಗಳಾಗಿದ್ದರು. ಅವರ ವಚನಗಳು ಅನುಪಮ. ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ, ಶಿಶು ಸಾಹಿತ್ಯ, ಅನುವಾದ ಮುಂತಾದ ಸಾಹಿತ್ಯದ ಎಲ್ಲಾ ಪ್ರಕಾರದ ಬರವಣಿಗೆ ಮಾಡಿದ್ದರು. ಡಾ. ಸಿದ್ಧಯ್ಯ ಪುರಾಣಿಕರದ್ದು ಕವಿಹೃದಯ, ಮಾತೃಹೃದಯ, ಸ್ತ್ರೀಹೃದಯವಾಗಿತ್ತು. ಕನ್ನಡದ ಅಪರೂಪದ ಅಪಾರ ಸಾಹಿತ್ಯದ ನಿಧಿಯಾಗಿದ್ದ ಇವರು ಕಲಬುಗರ್ಿಯಲ್ಲಿ ನಡೆದ ಅಖಿಲ ಅವರ ಹೆಸರಿನಲ್ಲಿ ಪ್ರತಿವರ್ಷ ಸರಕಾರದಿಂದ ಪ್ರಶಸ್ತಿಯನ್ನು ನೀಡಬೇಕೆಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ನ್ಯಾಶನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ನಿಮಿಷಾಂಬ ಪ್ರಕಾಶನ, ವರಿಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಹಾಗೂ ಕಲ್ಯಾಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮೀಡಿಯಾ ಕ್ಲಬ್ ಗೌರವಾಧ್ಯಕ್ಷರಾದ ಸೋಮರೆಡ್ಡಿ ಅಳವಂಡಿ ಅವರು 'ಸುಮಸಿರಿ ಕನ್ನಡ ಪ್ರಕಾಶನ'ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ವೃತ್ತಿಪರ ಸಾಹಿತ್ಯ ಹೆಚ್ಚಾಗಿ ಆಂಗ್ಲ ಭಾಷೆಯಲ್ಲಿಯೇ ಇದೆ. ಎಂದರು.
ಹಿರಿಯ ಸಾಹಿತಿಯಾದ ಡಿ.ಎಂ.ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕನ್ನಡದ ಅಳಿವು-ಉಳಿವು ಕನ್ನಡಿಗರ ಮೇಲೆಯೇ ಇದೆ. ಎ.ಟಿ.ಎಂ.ನಲ್ಲಿ ಹಣ ತೆಗೆಯಲು ಕನ್ನಡ ಭಾಷೆಯನ್ನು ಬಳಸಬೇಕು. ಬ್ಯಾಂಕಿನ ಚಲನ್ಗಳನ್ನು ಕನ್ನಡದಲ್ಲಿಯೇ ಭತರ್ಿ ಮಾಡಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದರು.
'ಪತ್ರಿಕೋಧ್ಯಮದಲ್ಲಿ ಜಿ.ಎಸ್.ಗೋನಾಳ' ಗ್ರಂಥವನ್ನು ಬಿಡುಗಡೆಗೊಳಿಸಿದ ಸಂಶೋಧಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರು ಮಾತನಾಡಿ, ಜಿ.ಎಸ್.ಗೋನಾಳರ ಬಗ್ಗೆ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಸಂಗ್ರಹಿಸಿ ಅವರ ವ್ಯಕ್ತಿತ್ವವನ್ನು ಈ ಗ್ರಂಥದಲ್ಲಿ ಅನಾವರಣಗೊಳಿಸಲಾಗಿದೆ ಎಂದರು.ಮಂಜುನಾಥ ಚಿತ್ರಗಾರರ 'ಮಣ್ಣಿನ ಗೊಂಬೆ' ಕವನ ಸಂಕಲನ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಅಕ್ಬರ ಕಾಲಿಮಿಚರ್ಿ ಅವರು ಮಾತನಾಡಿ, 35 ಕವಿತೆಗಳನ್ನೊಳಗೊಂಡಿರುವ ಈ ಕೃತಿ ಓದಿಸಿಕೊಂಡು ಹೋಗುತ್ತದೆ. ತಾವು ಅನುಭವಿಸದ ಅನುಭವವನ್ನು ಕವಿತೆಗಳ ಮೂಲಕ ಹೊರಹಾಕಬೇಕು ಎಂದರು.
ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸಂತೋಷ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಉದಯಶಂಕರ ಪುರಾಣಿಕರು ಕೊಪ್ಪಳ ಜಿಲ್ಲೆಯ ಸಾಹಿತಿಗಳಿಗಾಗಿ ಪುಸ್ತಕ ಪ್ರಾರಂಭಿಸಿದ್ದಾರೆ. ಜಿಲ್ಲೆಯ ಲೇಖಕರು ತಮ್ಮ ಸಾಹಿತ್ಯದ ಪ್ರತಿಯನ್ನು ಅವರಿಗೆ ಇ-ಮೇಲ್ ಮಾಡಿದರೆ ಅವರು ಅದನ್ನು ಅಪ್ಲೋಡ್ ಮಾಡುತ್ತಾರೆ. ಹೀಗಾಗಿ ಕವಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ನ್ಯಾಶನಲ್ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯದಶರ್ಿಗಳಾದ ಪ್ರಹ್ಲಾದ ಅಗಳಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಕನ್ನಡದ ನೆಲ, ಜಲ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಲೇಖಕ ಮಂಜುನಾಥ ಚಿತ್ರಗಾರ ಮಾತನಾಡಿ, ನನ್ನ ಸಾಹಿತ್ಯ ರಚನೆ ಹಿಂದೆ ನನ್ನ ತಂದೆ-ತಾಯಿಗಳು, ಗುರುಗಳು ಮತ್ತು ಸಹೋದರರ ಪಾತ್ರ ಬಹು ಮುಖ್ಯವಾಗಿದೆ. ನಾನು ಇವರೆಲ್ಲರಿಗೆ ಚಿರಋಣಿಯಾಗಿದ್ದೆನೆ ಎಂದರು. ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ, ಕನ್ನಡ, ಕನ್ನಡಿಗ, ಕನರ್ಾಟದ ಏಳಿಗೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯೋಣ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಭಾಗ್ಯನಗರದ ಶಂಕರಾಚಾರ್ಯಮಠದ ಶಿವಪ್ರಕಾಶಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡ ಭಾಷೆ ಶ್ರೀಮಂತವಾದುದು. ಹೀಗಾಗಿಯೇ ಈ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯ ಎಂದರು. ಯಲಬುರ್ಗಾ ತಾಲೂಕಿನ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಎಚ್.ಕೆ.ಬಡಿಗೇರ, ಹಿರಿಯ ವಿಮರ್ಶಕರಾದ ಎ.ಎಂ.ಮದರಿ, ಮಕ್ಕಳ ಕವಿಗಳಾದ ಮಂಜುನಾಥ ಚಿತ್ರಗಾರ, ಗವಿಸಿದ್ಧಪ್ಪ ಬಾರಕೇರ, ಸಿ.ಆರ್.ಗಡಾದ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ಎಂ.ಕಂಬಾಳಿಮಠ, ಪ್ರಹ್ಲಾದ ಅಗಳಿ, ಕೊಟ್ರೇಶ ಶೇಡ್ಮಿ, ಹನುಮೇಶ ಕಡೆಮನಿ, ವಾದಿರಾಜ ಪಾಟೀಲ, ಮೋಯಿನ್ ಪಾಷಾಬೀ, ಶರಣಪ್ಪ ಬಿ.ನಂದಾಪೂರ, ಸ.ಶರಣಪ್ಪ ಪಾಟೀಲ, ಮೌನೇಶ ಬಡಿಗೇರ, ಅನೀಲ ಬಾಚನಹಳ್ಳಿ, ಫಕೀರಪ್ಪ ಗೋಟೂರು, ರುದ್ರಗೌಡ ಬಿ.ಪಾಟೀಲ, ಬಸವರಾಜ ಗುಡ್ಲಾನೂರು, ಮಹೇಶಗೌಡ ಬಾನಾಪೂರ, ಸಿ.ಆರ್.ಗಡಾದ, ಗಣೇಶ ಪವಾರ, ಹನುಮಂತಪ್ಪ ಅಂಡಗಿ ಚಿಲವಾಡಗಿ, ಉಮೇಶ ಎನ್.ಮುಧೋಳ ಇವರನ್ನು ಸನ್ಮಾನಿಸಲಾಯಿತು. ಅನ್ವಿಕಾ ಕೊಪ್ಲು ಪ್ರಾಥರ್ಿಸಿದರು. ರಂಗನಾಥ ಅಕ್ಕಸಾಲಿಗರ, ಅರುಣಾ ಬಾರಕೇರ, ಶಿವಲೀಲಾ ಹಿರೇಮಠ ನಿರೂಪಿಸಿದರು. ವೆಂಕಟೇಶ ನಾಯಕ ಸ್ವಾಗತಿಸಿದರು. ಗೋವಿಂದರಾಜ ಬಡಿಗೇರ ವಂದಿಸಿದರು.