ಬೆಳಗಾವಿ: ರಸ್ತೆಗಳ ದುರಸ್ಥಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ

ಬೆಳಗಾವಿ 16:  ದಿ. 13ರಂದು ನಗರದಲ್ಲಿ ಅತಿವೃಷ್ಠಿಯಿಂದಾಗಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ಥಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆರವರು ಇಂದು ಚಾಲನೆ ನೀಡಿದರು. ದುರಸ್ಥಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ನಗರದಲ್ಲಿ ಇತ್ತಿಚೆಗೆ ಸುರಿದ ಬಾರಿ ಮಳೆಯಿಂದ ನಗರದಲ್ಲಿ ಅತಿವೃಷ್ಠಿ ಉಂಟಾಗಿ ನಗರದ ಎಲ್ಲ ಮುಖ್ಯ ರಸ್ತೆಗಳು ಹಾಗೂ ಒಳ ರಸ್ತೆಗಳು ಹಾಳಾಗಿರುವ ಕಾರಣ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿರುವುದರಿಂದ ತಗ್ಗು ಗುಂಡಿಗಳು ಬಿದ್ದಿರುವ ರಸ್ತೆಗಳನ್ನು (ಪಾಟ್ ಹೊಲ್ ಪಿಲ್ಲಿಂಗ್) ಮುಚ್ಚಿಸಿ ದುರಸ್ಥಿ ಮಾಡಲಾಗುವುದು ಹಾಗೂ ತುಂಬಾ ಹದಗೆಟ್ಟಿರುವ ರಸ್ತೆಗಳನ್ನು ಅಗತ್ಯವಿದ್ದರೆ ಅವುಗಳ ಮರು ನಿಮರ್ಾಣ ಕಾಮಗಾರಿಗಳನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಆದಷ್ಟು ಬೇಗನೆ ರಸ್ತೆಗಳ ದುರಸ್ಥಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದರು.