7ನೇ ಆರ್ಥಿಕ ಗಣತಿ ಕ್ಷೇತ್ರ ಸಮೀಕ್ಷೆಗೆ ಚಾಲನೆ

ಕೊಪ್ಪಳ 12: 7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷೆಗೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ಮೊಬೈಲ್ ತಂತ್ರಾಂಶದಲ್ಲಿ ತಮ್ಮ ಮಾಹಿತಿಯನ್ನು ನೀಡುವುದರ ಮೂಲಕ ಚಾಲನೆ ನೀಡಿದರು.

ಆಥರ್ಿಕ ಸಾಂಖ್ಯಿಕ ನಿದರ್ೇಶನಾಲಯ ಹಾಗೂ ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾದ 7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷೆ ಕಾರ್ಯಕ್ರಮದ ಅಂಗವಾಗಿ ಸಮೀಕ್ಷಾ ತಂಡವು ಇಂದು (ಡಿ.12) ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಸಮೀಕ್ಷೆ ಆರಂಭಿಸಲಾಗಿತು.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಮಾತನಾಡಿ, ಗಣತಿದಾರರು ತಮಗೆ ನಿದರ್ಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿ ಮನೆ, ಕಟ್ಟಡಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ವ್ಯಾಪಾರ-ಉದ್ಯಮದ ವರದಿ ಸಲ್ಲಿಸಿ 7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷೆಯನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಮಾತನಾಡಿ, 7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷೆಯು ಮನೆ ಮನೆಗೆ ಭೇಟಿ ನೀಡಿ ಉದ್ಯಮಿಗಳ ಮಾಹಿತಿ ಪಡೆದು ಹೋಟೆಲ್, ಕಾಪರ್ೆಂಟರ್, ಟೇಲರಿಂಗ್, ಬೇಕರಿ ತಿನಿಸುಗಳ ತಯಾರಿಕೆ, ಕೂದಲು ಹಿಂಜುವಿಕೆ, ಪುಟ್ಟಿ ಹೆಣೆಯುವುದು, ಗುಡಿಕೈಗಾರಿಕೆಯ ಕೆಲಸಗಳು ಮತ್ತು ಗೃಹ ಕೈಗಾರಿಕೆಯ ಕೆಲಸಗಳು ಇತ್ಯಾದಿಗಳ ಮಾಹಿತಿಯನ್ನು ಸಂಗ್ರಹಿಸಲಿದೆ. ಈ ಸಮೀಕ್ಷೆ ಕಾರ್ಯವನ್ನು ಈ ಬಾರಿ ಮೊಬೈಲ್ ತಂತ್ರಾಂಶದ ಮೂಲಕ ಕೈಗೊಳ್ಳಲಾಗುತ್ತಿದೆ. ಕ್ಷೇತ್ರ  ಕಾರ್ಯವನ್ನು ಕಾಮನ್ ಸವರ್ಿಸ್ ಸೆಂಟರ್ (ಸಿಎಸ್ಸಿ) ರವರು ಮಾಡುತ್ತಿದ್ದು, ಈಗಾಗಲೇ ಎಲ್ಲಾ ತಾಲೂಕಿನ ಗಣತಿದಾರರಿಗೆ 7ನೇ ಆರ್ಥಿಕ ಗಣತಿ ಬಗ್ಗೆ ತರಬೇತಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

7ನೇ ಆಥರ್ಿಕ ಗಣತಿ ಕ್ಷೇತ್ರ ಸಮೀಕ್ಷಾ ಕಾರ್ಯಕ್ರಮದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿದರ್ೇಶಕರು, ಉಪನಿರ್ದೇಶಕರು, ಜಿಲ್ಲಾ ಮಾಹಿತಿ ಮತ್ತು ಪ್ರಚಾರ ಅಧಿಕಾರಿಗಳು, ಜಿಲ್ಲೆಯ ಉಪವಿಭಾಗಾಧಿಕಾರಿಗಳು, ವಾಣಿಜ್ಯ ತೆರಿಗೆ ಉಪ ಆಯುಕ್ತರು  ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾದರ/ ಶಿರೆಸ್ತೇದಾರ/ ಕಂದಾಯ ನಿರೀಕ್ಷಕರು/ ಗ್ರಾಮಲೆಕ್ಕಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದು,  ಸಿ.ಎಸ್.ಸಿ. (ಕಾಮನ್ ಸವರ್ಿಸ್ ಸೆಂಟರ್) ಪ್ರಕಾರ 7ನೇ ಆರ್ಥಿಕ ಗಣತಿಗೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ 121, ಗ್ರಾಮೀಣ ಪ್ರದೇಶದಲ್ಲಿ 333 ಸೇರಿ ಒಟ್ಟು 454 ಗಣತಿದಾರರು ಮತ್ತು 24 ನಗರ, 111 ಗ್ರಾಮೀಣ ಸೇರಿ ಒಟ್ಟು 135 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. 7ನೇ ಆರ್ಥಿಕ ಗಣತಿ ಕ್ಷೇತ್ರ ಕಾರ್ಯದಲ್ಲಿ ಸಮೀಕ್ಷೆ ಮಾಡಲು ಬರುವ ಗಣತಿದಾರರಿಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ನಂತರ ಸಮೀಕ್ಷಾ ತಂಡವು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹಾಗೂ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಅವರ ನಿವಾಸಕ್ಕೆ ಹಾಗೂ ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕ ಸಿದ್ದರಾಮೇಶ್ವರ ಅವರ ಕಚೇರಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿತು. ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕ ಮಾರುತಿ ಸೇರಿದಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.