ಶಿಗ್ಗಾವಿ 28 : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಬೋರ್ವೆಲ್ ಗಳಿಗೆ ವಿದ್ಯುತ್ ಸಮಸ್ಯೆ ಆಗಬಾರದು. ಮಳೆಗಾಲ ಪ್ರಾರಂಭದಲ್ಲಿ ವಾತಾವರಣ ತಂಪಾಗಿರುವದರಿಂದ ಕೊವಿಡ್ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು ಆರೋಗ್ಯಾಧಿಕಾರಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು.ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಶಾಲೆಗಳ ಪ್ರಗತಿ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಂದು ತಾಲೂಕಾಡಳಿತಧಿಕಾರಿ, ಜಿಲ್ಲಾ ಪಂಚಾಯತ್ ಜಂಟಿ ಸಹಾಯಕ ಕೃಷಿ ನಿರ್ದೇಶಕ ಜಿ ಮಂಜುನಾಥ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕು ಪಂಚಾಯತ್ಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲಿಸಿ ಸೂಚನೆ ನೀಡಿದರು.ಮೇ.29 ಶಾಲೆಗಳು ಆರಂಭಗೊಳ್ಳಲಿದ್ದು, ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಸರಕಾರ ಉಚಿತವಾಗಿ ಪೂರೈಸುವ 352687 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, 199173 ಪಠ್ಯ ಪುಸ್ತಕಗಳು ಪೂರೈಕೆಯಾಗಿದೆ ಈಗಾಗಲೇ ವಿತರಣೆ ಕಾರ್ಯ ನಡೆದಿದೆ. 23575 ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಸರಕಾರದಿಂದ ಇನ್ನೂ ಸರಬರಾಜು ಆಗಿರುವುದಿಲ್ಲ. ತಾಲೂಕಿನ 57 ಶಾಲೆಗಳ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ 70 ರಷ್ಟಾಗಿದೆ. 100 ರ ಪ್ರತಿಶತ ಸಾಧನೆ 4 ಶಾಲೆಗಳು, 80 ರಿಂದ 99 ಪ್ರತಿಶತ 12 ಶಾಲೆಗಳು, 60 ರಿಂದ 79 ರ ಪ್ರತಿಶತ ಸಾಧನೆ 22 ಶಾಲೆಗಳು, 50 ರಿಂದ 59 ಪ್ರತಿಶತ 12 ಶಾಲೆಗಳು ಸಾಧನೆ ಮಾಡಿದ್ದು, 20 ರಿಂದ 50 ರ ವಳಗೆ 5 ಐದು ಶಾಲೆಗಳು ಸೇರಿದಂತೆ ಪಟ್ಟಣದ ಚನ್ನಪ್ಪ ಕುನ್ನೂರು ಪ್ರೌಢಶಾಲೆ ಮತ್ತು ಹುಲಗೂರಿನ ಮೌನೇಶ್ವರ ಪ್ರೌಢ ಶಾಲೆಗಳು ಸೊನ್ನೆ ಸಾಧನೆಯಲ್ಲಿದ್ದು ಈಗಾಗಲೇ ಆ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮಕ್ಕಳ ಪ್ರಗತಿಗೆ ಸೂಚನೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗರ ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ ಕೋವಿಡ್ ರೋಗಿಗಳು ಪತ್ತೆಯಾಗಿಲ್ಲ, ಪತ್ತೆಯಾದಲ್ಲಿ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚು ರೋಗಿಗಳು ಪತ್ತೆಯಾದರೇ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂಜಾಗೃತ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ಎ.ಆರ್.ತಿಳಿಸಿದರು.ಕೊವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ 15 ಐಸಿಯು ಬೆಡ್‌ಗಳ ಜೊತೆಗೆಆಕ್ಸಿಜನ್ ಜನರೇಷನ್ ಪ್ಲಾಂಟೇಷನ್ ಸಿದ್ಧವಿದೆ ವೆಂಟಿಲೇಟರ್ ಸೌಲಭ್ಯವಿದೆ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷಿಸಲು ಸಿದ್ಧತೆ ಕೈಗೊಳ್ಳಲಾಗಿದೆ.ಕೊವಿಡ್ ಬಗ್ಗೆ ಭಯಪಡಬೇಡುವ ಅಗತ್ಯವಿಲ್ಲ ಆದರೆ, ಎಚ್ಚರವಹಿಸಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಮಕ್ಕಳು, ಗರ್ಭಿಣಿ ಮಹಿಳೆಯರು, ವಯೋವೃದ್ಧರು, ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆವುಳ್ಳವರು ಜಾಗೃತರಾಗಿರಬೇಕು. ಮಳೆಗಾಲ ಆರಂಭವಾಗಿದೆ. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಕೈಗೊಂಡ ಅಗತ್ಯ ಕ್ರಮಗಳಲ್ಲಿ ಮುಖ್ಯವಾಗಿ ಸೊಳ್ಳೆಗಳನ್ನು ನಾಶಪಡಿಸಲು ಶಿಗ್ಗಾವಿ, ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಶುಚಿತ್ವ ಕುರಿತು ಮನೆ ಮನೆಗಳಲ್ಲಿ ಈ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೊವಿಡ್ ಜಾಗ್ರತೆ ವಹಿಸಲು ಗ್ರಾಮ ಪಂಚಾಯತಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ ಡಾ. ಸತೀಶ, ಸಭೆ, ಸಮಾರಂಭಗಳು ನಡೆಯುವ ಸ್ಥಳದಲ್ಲಿ ಸ್ಕ್ಯಾನಿಟೈಸರ್ ಮಾಡುವುದು ಅವಶ್ಯವಾಗಿದೆ. ತಾಲೂಕು ಆಡಳಿತ ಕೂಡ ಪೂರ್ವಭಾವಿಯಾಗಿ ಕ್ರಮಕೈಗೊಳ್ಳುವಂತೆ ಸಭೆಗೆ ಮನವಿ ಮಾಡಿದರು.
ಸಭೆಯಲ್ಲಿ ಕೃಷಿ, ಆಹಾರ, ಹೆಸ್ಕಾಂ, ಕಂದಾಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ತಾಪಂ ಕಾರ್ಯನಿವಾಹಕ ಅಧಿಕಾರಿ ಎಂ.ಎಸ್. ಸಾಳೂಂಕೆ, ತಹಸೀಲ್ದಾರ ರವಿಕುಮಾರ ಕೊರವರ, ಸಹಾಯಕ ಯೋಜನಾ ನಿಧೇಶಕ ಶಿವಾನಂದ ಸಣ್ಣಕ್ಕಿ, ತಾಪಂ ವ್ಯವಸ್ಥಾಕ ಸುರೇಶ ತಗ್ಗಿಹಳ್ಳಿ, ರಾಯಪ್ಪ ನಾಗಪ್ಪನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.