ಶಿನ್ನಾಳ ಗ್ರಾಮದ ವಿವಿದೊದ್ದೇಶ ಸಂಘದ ಚುನಾವಣೆ: ದಿನೇಶ ರಾಮಚಂದ್ರ ಕಾಂಬಳೆ ಗೆಲುವು

Election of Vividoddesha Sangh of Shinnal village: Dinesh Ramachandra Kamble wins

ಸಂಬರಗಿ 05: ಶಿನ್ನಾಳ ಗ್ರಾಮದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಾಲಗಾರ ಪರಿಶಿಷ್ಠ ಜಾತಿ ಮತಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಪೆನಲ್‌ನ ದಿನೇಶ ರಾಮಚಂದ್ರ ಕಾಂಬಳೆಜಯ ಸಾಧಿಸಿದರು.   

ಒಟ್ಟು ಚಲಾವಣೆಯಾದ 1015 ಮತಗಳಲ್ಲಿ ಜಯಶಾಲಿಯಾದ ದಿನೇಶ ಕಾಂಬಳೆ 570 ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾದರು. ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಚೇತನ ಗಾಯಕವಾಡ, ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದ ನಮ್ಮ ಪೆನಲ್ ನಿಂದ ಸ್ಪರ್ಧೆ ಮಾಡಿದ್ದ ದಿನೇಶ ಕಾಂಬಳೆ ಭಾರೀ ಬಹುಮತದಿಂದ ಜಯಶಾಲಿಯಾಗಿದ್ದಾರೆ ಎಂದ ಅವರು ನಮ್ಮ ಅವಧಿಯಲ್ಲಿ ಸಹಕಾರ ಸಂಘದ ಮೂಲಕ ರೈತರಿಗೆ ಸಾಲದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡುವುದಾಗಿ ಹೇಳಿದರು.     

ವಿಜಯೋತ್ಸವದಲ್ಲಿ ದಾಮೋದರ ಪಾಟೀಲ,ರಾಜು ಕವಟೇಕರ, ಪಿಂಟು ಮಗದುಮ್, ರಾಜು ನಾಯಿಕ, ಬಜರಂಗ ಪಾಟೀಲ, ದೀಪಕ್ ಕವಟೇಕರ, ಕುಶಾಬಾ ಬಂಡಗರ, ಅಸ್ಕರ ಪಠಾಣ, ಪೀರೋಜಖಾನ ಪಠಾಣ, ಇಂದ್ರಜಿತ್ ಪಾಟೀಲ, ವಿಶಾಲ ಕಾಂಬಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  ಚುನಾವಣಾಧಿಕಾರಿಯಾಗಿ ಶಂಕರ ಕರಬಸಣ್ಣವರ, ಸಹಾಯಕರಾಗಿ ಅನೀಲ ಪೊತದಾರ, ಸಿಬ್ಬಂದಿ ಉಮೇಶ ಕಿತ್ತೂರ, ಲಕ್ಷ್ಮಣ ಪಾಟೀಲ, ಮಹೇಶ ಪಾಟೀಲ ಕಾರ್ಯನಿರ್ವಹಿಸಿದರು.