ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ

Exhibition of District Level Postage Stamps

ಬೆಳಗಾವಿ ಡಿ.30: ಬೆಳಗಾವಿ ವಿಭಾಗದ ಭಾರತೀಯ ಅಂಚೆ ಇಲಾಖೆ ಇವರ ವತಿಯಿಂದ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ನಗರದ ಹಿಂದವಾಡಿ ಮಹಾವೀರ ಭವನದಲ್ಲಿ ದಿನಾಂಕ. 08-01-2025 ರಿಂದ 10-01-2025 ರವರೆಗೆ ಆಯೋಜಿಸಲಾಗಿದೆ.  

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಾರೆ ಮತ್ತು ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಆದ್ದರಿಂದ ಈ ಪ್ರದರ್ಶನವನ್ನು “ಋಣಠಿಜಥ2025” ಎಂದು ನಾಮಕರಣ ಮಾಡಲಾಗಿದೆ. ಈ ಪ್ರದರ್ಶನದ ವೇಳೆಯಲ್ಲಿ 150 ಫ್ರೇಮಗಳಲ್ಲಿ ವಿವಿಧ ವಿಷಯಗಳನ್ನು ಒಳಗೊಂಡ ಹಾಗೂ ಅತ್ಯಂತ ಪುರಾತನ ಹಾಗೂ ವಿವಿಧ ದೇಶಗಳ ಅಂಚೆ ಚೀಟಿಗಳ ಪ್ರದರ್ಶನವನ್ನು ಕೂಡ ಏರಿ​‍್ಡಸಲಾಗಿದೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆಯಿಂದ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಅಂಚೆ ಲಕೋಟೆಗಳು ಹಾಗೂ ಛಾಯಾಚಿತ್ರ ಪೋಸ್ಟಕಾರ್ಡಗಳನ್ನು ಬಿಡುಗಡೆಗೊಳಿಸಲಾಗುವುದು ಹಾಗೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಲಾಗುವುದು. 

ದಿನಾಂಕ. 08-01-2025 ರಂದು ತಮ್ಮ ಸ್ವಂತ ಡ್ರಾಯಿಂಗ ಪೇಪರ ಬಳಸಿ ಬೆಳಗಾವಿಯ ಐತಿಹಾಸಿಕ ಸ್ಥಳಗಳ ವಿಷಯದ ಮೇಲೆ ಅಂಚೆ ಚೀಟಿಗಳ ವಿನ್ಯಾಸಗೊಳಿಸುವ ಸ್ಪರ್ಧೆ ಆಯೋಜಿಸಲಾಗಿದೆ. 

ದಿನಾಂಕ. 09-01-2025 ರಂದು ಸಮಾಜದಲ್ಲಿ ಅಂಚೆ ಕಛೇರಿಗಳ ಪಾತ್ರ ವಿಷಯದ ಮೇಲೆ ಂ4 ಗಾತ್ರದ ಕಾಗದದ ಮೇಲೆ 500 ಶಬ್ಧಗಳನ್ನು ಮೀರದಂತೆ ಪತ್ರ ಬರೆಯುವ ಸ್ಪರ್ಧೆ ಇರುತ್ತದೆ. 

ದಿನಾಂಕ : 10-01-2025 ಅಂಚೆ ಚೀಟಿಗಳ ಸಂಗ್ರಹಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವುದು. 

ಬೆಳಗಾವಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಸಾರ್ವಜನಿಕರಿಗೂ ಕೂಡ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮುಕ್ತ ಅವಕಾಶವಿರುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬೆಳಗಾವಿ ವಿಭಾಗ ಅಂಚೆ ಅಧೀಕ್ಷಕರ ಕಾರಾ​‍್ಯಲಯದ ಅಧೀಕ್ಷಕರಾದ ವಿಜಯ ವಾದೋನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.