ಹಾವೇರಿ : ರಾಜ್ಯದಲ್ಲಿ ಹಿಂದೆಂದು ಕಂಡರಿಯದ ಪ್ರವಾಹ ಪರಸ್ಥಿತಿ ಪರಿಣಾಮವಾಗಿ 22 ಜಿಲ್ಲೆಗಳ 103 ತಾಲೂಕಗಳು ತತ್ತರಿಸಿ ಹೋಗಿದ್ದು, ಸಮರ್ಪಕವಾಗಿ ರಾಜ್ಯದ ಸಂತ್ರಸ್ತರಿಗೆ ಕೇಂದ್ರದಿಂದ ನೆರವು ನೀಡಲು ಅಸಮರ್ಥರಾದ ಬಿಜೆಪಿ ಪಕ್ಷದ ಎಂಪಿಗಳು ರಾಜೀನಾಮೆ ನೀಡುವಂತೆ ಹಾಗೂ ರಾಜ್ಯ ಸಕರ್ಾರವನ್ನು ವಜಾಗೊಳಿಸುವಂತೆ ಮಾನ್ಯ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯ ನೆರೆ ಪೀಡಿತ ಪ್ರದೇಶದಲ್ಲಿ ಪ್ರವಾಹದಿಂದ ಸುಮಾರು 3 ತಿಂಗಳ ಕಳೆದರೂ ಪರಿಹಾರಕ್ಕಾಗಿ ಎಲ್ಲರೂ ಬೇಡಿಕೊಳ್ಳಬೇಕಾದ ಪ್ರಸಂಗ ಉಂಟಾಗಿದೆ. ಪ್ರವಾಹದಿಂದ 87 ಜನರ ಸಾವು,2 ಲಕ್ಷದ 30 ಸಾವಿರ ಮನೆಹಾನಿ,1ಲಕ್ಷದ 79 ಸಾವಿರ ಮನೆಗಳು ಸಂಪೂರ್ಣ ನಾಶ,7 ಲಕ್ಷದ 82 ಸಾವಿರ ಹೆಕ್ಟರ್ ಬೆಳೆ ನಾಶ,5 ಸಾವಿರ ಹೆಕ್ಟೇರ್ ವ್ಯಾವಸಾಯ ಭೂಮಿ ಸಂಪೂರ್ಣ ನಾಶ,35 ಸಾವಿರ ಕಿ.ಮೀ ರಸ್ತೆ ಹಾಳಾಗಿವೆ.2828 ಸೇತುವೆಗಳು ಕೊಚ್ಚಿ ಹೋಗಿವೆ.58 ಸಾವಿರ ವಿದ್ಯುತ್ ಕಂಬಗಳು ನಾಶ.4076 ಟ್ರಾನ್ಸ್ಫರ್ಮರಗಳು ನಾಶಗೊಂಡಿವೆ. ಅಪಾರ ಪ್ರಮಾಣ ಸಾರ್ವಜನಿಕರ ಆಸ್ತಿ ಹಾನಿಯಾಗಿವೆ. ರೈತರ ಬಡವರ ಕೂಲಿ ಕಾಮರ್ಿಕರ ಪ್ರಾಣಿಗಳು ಕಣ್ಮರೆಯಾಗಿರುವ ಸಾಧ್ಯತೆಗಳಿವೆ. ಕೇಂದ್ರ ಸಕರ್ಾರಕ್ಕೆ ರಾಜ್ಯದಿಂದ 25 ಸಂಸದರನ್ನು ನೀಡಿ ಸಕರ್ಾರ ರಚನೆಯ ಬಹು ಭಾಗ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ ಸಕರ್ಾರ ಆಡಳಿತ ನಡೆಸುತ್ತಿದ್ದರೂ ಜನರ ಕಷ್ಟ ಕೇಳಿ ಪರಿಹಾರ ನೀಡಲು ಹಿಂದೆಟು ಹಾಕುತ್ತಿದ್ದಾರೆ.
ರಾಜ್ಯದ ಜನರ ಪರಸ್ಥಿತಿ ಹದಿಗೆಟ್ಟಿದ್ದರೂ ಬಿಜೆಪಿ ಪಕ್ಷದ ಆಡಳಿತದಲ್ಲಿ ಇರುವ ನಾಯಕ ಮಾಧುಸ್ವಾಮಿ,ಲಕ್ಷ್ಮಣ ಸವದಿ,ಕೆ,ಎಸ್ ಈಶ್ವರಪ್ಪ ಅವಿವೇಕಿತನದಿಂದ ವತರ್ಿಸುವ ಪ್ರತಾಪ ಸಿಂಹ ಹಾಗೂ ತೇಜಸ್ವಿ ಸೂರ್ಯ ಉಡಾಫೆ ಉತ್ತರ ನೀಡಿ ಸಂತ್ರಸ್ತರಿಗೆ ಅವಮಾನ ಮಾಡುವ ದರ್ಪ ದಬ್ಬಾಳಿಕೆ ತೊರಿಸುತ್ತಿದ್ದಾರೆ. ಬಿಎಸ್ಪಿ ಪಕ್ಷ ಇಂತಹ ಜನ ವಿರೋಧಿ ವರ್ತನೆಯನ್ನು ಸಹಿಸುವುದಿಲ್ಲ. ಜನಪರ ಕೆಲಸಗಳನ್ನು ಮಾಡುತ್ತಾ ಎಲ್ಲ ವರ್ಗದ ಜನರ ಹಿತಾಸಕ್ತಿಗೆ ಬಿಎಸ್ಪಿ ಪಕ್ಷದ ಬದ್ಧವಾಗಿದೆ. ರಾಜ್ಯದ ಸಂತ್ರಸ್ತರನ್ನು ನಿರ್ಲಕ್ಷೆ ಮಾಡುತ್ತಿರುವ ಎಂಪಿ ಗಳು ರಾಜೀನಾಮೆ ನೀಡಬೇಕು ಮತ್ತು ನೆರೆ ಪೀಡಿತ ಜನರಿಗೆ ಪರಿಹಾರ ನೀಡುವಲ್ಲಿ ವಿಫಲರಾದ ರಾಜ್ಯ ಸಕರ್ಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮೂಲಕ ಬಿಎಸ್ಪಿ ಪಕ್ಷ ಒತ್ತಾಯಿಸಿದೆ.
ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ, ಮುಖಂಡರಾದ ವಿಜಯಕುಮಾರ ವಿರಕ್ತಮಠಮ, ಅಬ್ದುಲ್ಖಾದರ ಧಾರವಾಡ,ನಾಗರಾಜ ಬ್ಯಾಡಗಿ,ಇಸ್ಮಾಯಿಲ್ ಬುಡಂದಿ.ಜಗದೀಶ ಎರಿಶಿಮಿ.ಕಲಂದರ್ ಮಲ್ಲಿಗಾರ,ಆರ್ ಎಸ್ ಗುಡಗುರ ಸೇರಿದಂತೆ ಇತರರಿದ್ದರು.