ಹೊನ್ನಾವರ 12: ಶ್ರೀ ಕ್ಷೇತ್ರ ಗೇರುಸೊಪ್ಪದ ಬಂಗಾರಮಕ್ಕಿಯಲ್ಲಿ ಶ್ರೀ ವೀರಾಂಜನೇಯ ದೇವರ ಪುಷ್ಪ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು.
ಸಾಂಪ್ರದಾಯಿಕ ಪೂಜಾ ವಿಧಾನಗಳಿಂದ ದೇವಸ್ಥಾನದಲ್ಲಿ ಆರಂಭದಲ್ಲಿ ಪೂಜೆ, ಪುನಸ್ಕಾರ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ಭಾಗಗಳಿಂರ ಆಗಿಸಿದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು.
ಈ ವೇಳೆ ವೀರಗಾಸೆ, ಸಂಸಾಳೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ರಥೋತ್ಸವಕ್ಕೆ ಮೆರಗು ತಂದವು.