ಲೋಕದರ್ಶನ ವರದಿ
ಉಚಿತ ಬೇಸಿಗೆ ಕರಾಟೆ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮ
ಬಳ್ಳಾರಿ 05: ದಿನಾಂಕ:05 ರಂದು ಬೆಳಿಗ್ಗೆ: 9.00ಗಂಟೆಗೆ ಬಳ್ಳಾರಿ ನಗರದ ಬಾಲ ಭಾರತಿ ಶಾಲೆಯಲ್ಲಿ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ನ ವತಿಯಿಂದ ಉಚಿತ ಬೇಸಿಗೆ ಕರಾಟೆ ಶಿಬಿರದ ಉದ್ಘಾಟನೆ ಕಾರ್ಯಕ್ರಮ ಮತ್ತು ಮಕ್ಕಳಿಗೆ ಬೆಲ್ಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ದಿಮೆದಾರರಾದ ಮೋಹನ್ರೆಡ್ಡಿ ಯವರು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಆತ್ಮ ರಕ್ಷಣೆಗೆ ಕರಾಟೆ ಕಲೆಯನ್ನು ಕಲಿಯಬೇಕು ಅದರಲ್ಲಿ ವಿಶೇಷವಾಗಿ ಮಕ್ಕಳಿಗೆ ಪ್ರತಿಯೊಬ್ಬ ಪೋಷಕರು ಕಲಿಸಲು ಮುಂದಾಗಬೇಕು ಇದರಿಂದ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಸೈರ್ಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಪೊಂಪನಗೌಡ್ರು, ನಿವೃತ್ತ ಇಂಜಿನಿಯರ್ ಇವರು ವಹಿಸಿದ್ದರು, ಇವರು ಮಾತನಾಡಿ ಇಂದಿನ ದಿನದಲ್ಲಿ ಕರಾಟೆ ಕಲಿಯುವುದು ಮಹಿಳೆಯರಿಗೆ ಅತ್ಯಂತ ಅವಶ್ಯಕತೆ ಇದೆ. ಇದರಿಂದ ಅವರು ತಮ್ಮ ಪ್ರಾಣ ಮತ್ತು ಮಾನವನ್ನು ಕಾಪಾಡಿಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿನಿಯು ಮತ್ತು ಮಹಿಳೆಯರು ಕರಾಟೆ ಕಲೆಯನ್ನು ಕಲಿತು ತಮ್ಮನ್ನೆ ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಅದರಲ್ಲಿ ವಿಶೇಷವಾಗಿ ಟ್ರಸ್ಟ್ ಉಚಿತವಾಗಿ ತರಬೇತಿ ನೀಡುತ್ತಿದ್ದು, ಇದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕೆಂದು ತಿಳಿಸದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವರಾಜಪ್ಪ ನವರು ಮತ್ತು ಆನಂದರೆಡ್ಡಿಯವರು, ಹಬ್ಬಳಗಂಡಿ ಬಸವರಾಜ ಅಣ್ಣನವರು, ಸೂಗೂರೇಶ್ವರ ಉಪನ್ಯಾಷಕರು ಭಾಗವಹಿಸಿದರು. ಕಾರ್ಯಕ್ರಮವನ್ನು ಕರಾಟೆ ಶಿಕ್ಷಕರಾದ ವಾಸುದೇವರಾಜಲು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಪ್ರದರ್ಶನ ನಡೆಯಿತು ಮತ್ತು ಗಣ್ಯರಿಂದ ಮಕ್ಕಳಿಗೆ ಕರಾಟೆ ಪ್ರಮಾಣ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಬಳ್ಳಾರಿ ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಓದುತ್ತಿರುವ ಟ್ರಸ್ಟ್ನ್ ಬ್ಲಾಕ್ಬೆಲ್ಟ್ ವಿದ್ಯಾರ್ಥಿನಿ ಜಿ. ದೇವಿಕಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ತೃತೀಯ ಸ್ಥಾನದಲ್ಲಿ ಬಂದಿದ್ದು, 625ಕ್ಕೆ 620 ಅಂಕಗಳನ್ನು ಪಡೆದಿದ್ದಾಳೆ. ಆ ವಿದ್ಯಾರ್ಥಿನಿಯನ್ನು ಟ್ರಸ್ಟ್ನ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್ನ್ ವತಿಯಿಂದ ಬೇಸಿಗೆ ಕರಾಟೆ ಶಿಬಿರವು ಪ್ರತಿದಿನ ಬೆಳಿಗ್ಗೆ:6.00 ರಿಂದ 7.30ರವರೆಗೆ ಹಾಗೂ ಸಂಜೆ: 5.30 ರಿಂದ 7.00 ಗಂಟೆಯವರೆಗೆ ಬಳ್ಳಾರಿ ನಗರದ ಬಾಲಾ ಭಾರತಿ ಶಾಲೆಯಲ್ಲಿ ನಡೆಯುತ್ತಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಉಪಯೋಗ ಮಾಡಿಕೊಳ್ಳಬೇಕೆಂದು ಟ್ರಸ್ಟ್ನ ಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿಯವರು ಮನವಿ ಮಾಡಿದ್ದಾರೆ.