ದರ್ಗಾ ಸೇವಾ ಸಮಿತಿ ವತಿಯಿಂದ ದಿ, 20 ರಂದು ಉಚಿತ ಖತ್ನಾ ಶಿಬಿರ
ಕೊಪ್ಪಳ 12: ನಗರದ ಹಸನ್ ರಸ್ತೆಯಲ್ಲಿರುವ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಹಜರತ್ ಸದರ ಶಾಹ ವಲಿ ದರ್ಗಾದ ಸೇವಾ ಸಮಿತಿ ವತಿಯಿಂದ ಇದೇ ದಿ, 20ರ ರವಿವಾರ ಬೆಳಗ್ಗೆ 9 ಗಂಟೆಗೆ ಉಚಿತ ಖತ್ನ ಶಿಬಿರ ನಡೆಯಲಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಮಾಜ ಬಾಂಧವರು ತಮ್ಮ ತಮ್ಮ ಮಕ್ಕಳ ಹೆಸರನ್ನು ಇದೇ ದಿ,18ರ ಒಳಗಾಗಿ ನೇರ ಭೇಟಿಯಾಗಿ ಅಥವಾ ದೂರವಾಣಿ ಸಂಪರ್ಕದ ಮೂಲಕ ನೋಂದಾಯಿಸಿಕೊಳ್ಳತಕ್ಕದ್ದು ಎಂದು ಉಚಿತ ಖತ್ನಾ ಶಿಬಿರದ ಸಂಘಟಕರಾದ ತೆಗ್ಗಿನಕೇರಾ ಓಣಿಯ ಸೈಯದ್ ಹಯಾತ್ ಪೀರ್ ಹುಸೇನಿ ಮತ್ತು ಸೈಯದ್ ಯಾಕೂಬ್ ಹುಸೇನಿ ರವರು ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.
ಅವರು ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಉಚಿತ ಖಾತ್ನಾ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಸಮವಸ್ತ್ರ ಓಷಧಿ ಮತ್ತು ಅಗತ್ಯ ಉಪಹಾರ ಕಿಟ್ ಗಳನ್ನು ನೀಡಲಾಗುವುದು, ಈ ಶಿಬಿರದಲ್ಲಿ ಡಾ, ಹಸನ್ ಅಲಿ ನಿಂಗಪುರ್ (ನವಾಜ್) ಖತ್ನಾ ಶಿಬಿರದ ಕಾರ್ಯ ನಿರ್ವಹಿಸಲಿದ್ದಾರೆ, ಕಾರಣ ಸಾರ್ವಜನಿಕ ಸಮಾಜ ಬಾಂಧವರು ತಮ್ಮ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಂಡು ಉಚಿತ ಖ ತ್ನಾ ಶಿಬಿರ ದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗದ ಸಾರ್ವಜನಿಕ ಸಮಾಜ ಬಾಂಧವರಲ್ಲಿ ಮನವರಿಕೆ ಮಾಡಿಕೊಳ್ಳಲಾಗಿದೆ ಎಂದು ಸಂಘಟಕರಾದ ಹಯಾತ್ ಪೀರ್ ಹುಸೇನಿ ಮತ್ತು ಸೈಯದ್ ಯಾಕೋಬ ಹುಸೇನಿ ಜಂಟಿಯಾಗಿ ಹೇಳಿಕೆ ನೀಡಿದರು ಅಲ್ಲದೆ ಇದೇ ವೇಳೆ ಕಳೆದ 26 ವರ್ಷಗಳಿಂದ ಸತತವಾಗಿ ಉಚಿತ ಖತ್ನ ಮಾಡುತ್ತಾ ಬಡ ಜನರ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸುತ್ತಿರುವ ಡಾ, ಹಸನ್ ಅಲಿ ನಿಂಗಾಪುರ್ ರವರಿಗೆ ದರ್ಗಾದ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಂ ಡಿ ಜಾಕೀರ್ ಗೇಟ್‌ಇನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು, ಹೆಚ್ಚಿನ ಮಾಹಿತಿಗಾಗಿ 9900470993 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ