ಲೋಕದರ್ಶನ ವರದಿ
ಗದಗ 11: ನಗರದ ಕಳಸಾಪುರ ರಸ್ತೆಯ ಸಿದ್ಧರಾಮೇಶ್ವರ ವೃತ್ತದ ಬಳಿ ನಡುರಸ್ತೆಯಲ್ಲಿಯೇ ಇರುವ ಮ್ಯಾನ್ ಹೋಲ್ ಒಡೆದು ಹೋಗಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇತ್ತ ಗಮನ ಹರಿಸದೆ ಮುಂದಾಗುವ ಅನಾಹುತಕ್ಕೆ ಕಾಯುತ್ತಿರುವ ಹಾಗಿದೆ. ಇದಕ್ಕೆ ಕಾರಣ ಸಂಪೂರ್ಣ ಕಳಪೆ ಗುಣಮಟ್ಟದ ಸಾಮಗ್ರಿ ಬಳಕೆಯಾಗಿರುವುದು ಕಂಡು ಬರುತ್ತದೆ.ನಿರ್ಲಕ್ಷವಹಿಸಿದ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.ಇದೆಲ್ಲದರ ಪರಿಣಾಮ ಜನರು ಮುಖ್ಯ ರಸ್ತೆಯಲ್ಲಿ ಸಂಚರಿಸಲು ಪ್ರಾಣವನ್ನು ತಮ್ಮ ಕೈಯಲ್ಲಿ ಹಿಡಿದು ಓಡಾಡಿವ ಪರಿಸ್ಥಿತಿ ತಂದಿರುವ ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ತುತರ್ಾಗಿ ಗಮನ ಹರಿಸಬೇಕು.
ಕಳಪೆ ಮಟ್ಟದ ಕಬ್ಬಿಣ ಮತ್ತು ಸಿಮೆಂಟ್ ಬಳಕೆಯಾಗಿರುವುದು ಈ ಮ್ಯಾನ್ ಹೋಲ್ ನಿಂದ ಕಂಡು ಬರುತ್ತದೆ.ಸಂಬಂಧಪಟ್ಟ ಗುತ್ತಿಗೆದಾರರಿಗೆ ಈ ಮೊದಲು ಇದೇ ತೇರನಾದ ಕಾಮಗಾರಿಯ ಬಗ್ಗೆ ವಿಚಾರಿಸಿದಾಗ ಗುತ್ತಿಗೆದಾರರು, ಅಧಿಕಾರಿಗಳು, ಈ ತರಹದ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡುವ ಪರಿಸ್ಥಿತಿ ಈ ಇಲಾಖೆಯಲ್ಲಿ ಇರುವುದು ಕಂಡುಬಂದಿದೆ ಎಂದು ಒಡೆದು ಹೋಗಿರುವ ಮ್ಯಾನ್ ಹೋಲ್ ಬಗ್ಗೆ ಆಕ್ರೋಶ ಗೊಂಡಿರುವ ಕನ್ನಡ ಚಳುವಳಿ ವಾಟಾಳ್ ಸಂಘಟನೆಯ ಗದಗ ಜಿಲ್ಲಾ ಅದ್ಯಕ್ಷರಾದ ರಾಜು ಎಫ್ ಪೂಜಾರ ಅವರು ತಿಳಿಸಿದರು. ಅವರು ಮುಂದಿನ ದಿನಗಳಲ್ಲಿ ತಮ್ಮ ಸಂಘಟನೆಯ ವತಿಯಿಂದ ಸಂಬಂಧಪಟ್ಟ ಕಛೇರಿಯ ಮುಂದೆ ಪ್ರತಿಭಟನೆ ಸಡೆಸುವುದಾಗಿ ಈ ಮೂಲಕ ಎಚ್ಚರಿಕೆ ನೀಡಿರುತ್ತಾರೆ.