ಗದಗ : ಮತದಾನ ಜ್ಯೋತಿ ಕಾರ್ಯಕ್ರಮ

ಗದಗ 16:  ಪ್ರಜಾಪ್ರಭುತ್ವ ಬಲಪಡಿಸಲು   ನೈತಿಕ ಹಾಗೂ  ನಿಷ್ಪಕ್ಷಪಾತ ಮತದಾನ  ಅವಶ್ಯವಾಗಿದ್ದು  ಮತದಾನ  ಪ್ರಕ್ರಿಯೆಯಲ್ಲಿ ಎಲ್ಲ ಅರ್ಹ ಮತದಾರರೂ ತಪ್ಪದೇ ಪಾಲ್ಗೊಳ್ಳಬೇಕು ಎಂದು   ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ  ನುಡಿದರು. 

ಗದಗ ಜಿಲ್ಲಾಡಳಿತ ಭವನದಲ್ಲಿ ಇಂದು  ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ   ವತಿಯಿಂದ ಹಮ್ಮಿಕೊಂಡ ಮತದಾನ ಜ್ಯೋತಿ ಕಾರ್ಯಕ್ರಮವನ್ನು   ಉದ್ಘಾಟಿಸಿ ಮಾತನಾಡಿದರು.  

ಗದಗ ಜಿಲ್ಲಾ ಸ್ವೀಪ್ ಸಮಿತಿಯಿಂದ  ಮತದಾರರಲ್ಲಿ ಜಾಗೃತಿ ಮೂಡಿಸಲು   ಅನೇಕ  ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು  ಗದಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ  ಮತದಾರರಿಗೆ  ಮತದಾನ  ಅರಿವನ್ನು ಮೂಡಿಸಲು  ಮತದಾನ ಜಾಥಾವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.       

ಜಿ.ಪಂ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಟಿ.ದಿನೇಶ,  ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಬಿ.ಬಿ. ವಿಶ್ವನಾಥ, ಜಿಲ್ಲಾ ಚುನಾವಣಾ ರಾಯಭಾರಿ  ಕು. ಪ್ರೇಮಾ ಹುಚ್ಚಮ್ಮನವರ, ಎಂ.ಡಿ.ತಳ್ಳಳ್ಳಿ, ಎನ್.ಆರ್ ನಿಡಗುಂದಿ, ಐ.ಎ.ಕುಂಬಾರ, ಜೆ.ಎಮ್ ಬೂದಿಹಾಳ ಹಾಗೂ ಜಿಲ್ಲಾ ಕ್ರೀಡಾಪಟುಗಳು ಉಪಸ್ಥಿತರಿದ್ದರು.