ಜಿಬ್ರಾಲ್ಟರ್, ಜ 27 ಇಲ್ಲಿ ನಡೆಯುತ್ತಿರುವ 18ನೇ ಜಿಬ್ರಾಲ್ಟರ್ ಚೆಸ್ ಫೆಸ್ಟಿವಲ್ ಟೂರ್ನಿಯ ಐದು ಸುತ್ತುಗಳಲ್ಲಿ ಗೆದ್ದು ಎಲ್ಲರ ಗಮನ ಸೆಳೆದಿದ್ದ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರು ಆರನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ವೆಸೆಲಿನ್ ಟೋಪಾಲೋವ್ ಅವರನ್ನು ಮಣಿಸಿ ಪ್ರಾಬಲ್ಯ ಮುಂದುವರಿಸಿದ್ದಾರೆ. 14ರ ಪ್ರಾಯದ ಚೆನ್ನೈ ಪಟು ಬಲ್ಗೇರಿಯಾದ ಆಟಗಾರನನ್ನು ಹಿಂದಿಕ್ಕಲು 33 ಚಲನೆಗಳಲ್ಲಿ ತಮ್ಮ ಚಾಣಕ್ಷತನ ಮೆರೆದಿದ್ದರು. ಇದಕ್ಕೂ ಮುನ್ನ ಸಹ ಸ್ಪರ್ಧಿ ಪಿ.ವಿ ನಂದಿತಾ ಅವರ ವಿರುದ್ಧ ಸೋಲು ಅನುಭವಿಸಿದ್ದ ಪ್ರಜ್ಞಾನಂದ, ನಂತರ ಸೋಲಿಲ್ಲದೆ ಮುನ್ನಗ್ಗುತ್ತಿದ್ದಾರೆ. ಪ್ರಜ್ಞಾನಂದ ಅವರು ಇತ್ತೀಚೆಗೆ 18 ವಯೋಮಿತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಪಂದ್ಯದ ಸೋಲಿನ ಬಳಿಕ ಮಾತನಾಡಿದ ಅವರು,’’ ಬಲ್ಗೇರಿಯನ್ ಆಟಗಾರನ ವಿರುದ್ಧ ಪೂರ್ವ ತಯಾರಿ ನಡೆಸುವುದು ಅತ್ಯಂತ ಕಠಿಣ,’’ ಎಂದು ಹೇಳಿದ್ದಾರೆ.ಐದು ಅಂಕಗಳನ್ನು ಪಡೆದಿರುವ ಇವರು ಆರು ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಏಳನೇ ಸುತ್ತಿನಲ್ಲಿ ಚೀನಾದ ಗ್ರ್ಯಾಂಡ್ ಮಾಸ್ಟರ್ ವಾಂಗ್ ವಿರುದ್ಧ ಸೆಣಸಲಿದ್ದಾರೆ.