ಪ್ರಗತಿ ಪರ ರೈತರಾದ ಗೌರಾಣಿ ಕುಟುಂಬ

Guarani family of progressive farmers

ಗುರ್ಲಾಪೂರ 07: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪೂರವು ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತ ಬಂದಿದೆ ಗ್ರಾಮದ ಪ್ರಗತಿ ಪರ ರೈತರಾದ ಗೌರಾಣಿ ಕುಟುಂಬವು ವ್ಯವಸಾಯಕ್ಕೆ ಹೆಚ್ಚಿನ ಮಹತ್ವ ನೀಡಿರುವ ಕುಟುಂಬವಾಗಿದೆ  

ಇತ್ತೀಚಿನ ದಿನಗಳಲ್ಲಿ ರೈತನು ವ್ಯವಸಾಯ ಮಾಡುವಾಗ ರೈತನ ಬೆನ್ನಲುಬೂಗಳಾದ ಎತ್ತುಗಳ ವ್ಯವಸಾಯ ಕಡಿಮೆ ಮಾಡಿ ಕೃಷಿಯಂತ್ರಳ ಸಹಾಯದಿಂದ ಒಕ್ಕಲುತನ ಮಾಡುವ ದಿನಗಳಲ್ಲಿ ಗ್ರಾಮದ ರಾಮಪ್ಪ ಗೌರಾಣಿ ಕುಟುಂಬದವರು ಎತ್ತುಗಳ ಸಾಕಾಣಿಕೆಯನ್ನು ಮರೆತಿಲ್ಲ . 

ಅವರ ಮಕ್ಕಳು ಗ್ರಾಮಿಣ ಕ್ರೀಡೆಗಳಂತೆ ಹೊರಿಗಳನ್ನು ಸಾಕಿಕೊಂಡು ಅವುಗಳ ಪ್ರದರ್ಶನ ಮಾಡುತ್ತಾ ಇವತ್ತೀನ ದಿನಗಳಲ್ಲಿ ಅವರು ಸಾಕಿದ ಹೊರಿಗಳು ಒಂದು ನಿಮಿಷದ ಬಂಡಿ ಷರತ್ತು ವೇಗವಾಗಿ ಒಡುವ ುಷರತ್ತುಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿರುತ್ತಾರೆ 

ಆದರೆ ಅವುಗಳಲ್ಲಿ ಒಂದು ವಿಶೇಷತೆ ಎಂದರೆ ಅವರು ಸಾಕಿದ ಎರಡು ಹೋರಿಗಳುನ್ನು ರಾಯಬಾಗ ತಾಲೂಕಿನ ಹಿಡಕಲ ಗ್ರಾಮದ ಅಶೋಕ ಹಾರುಗೇರಿ ಇವರು 3.ಲಕ್ಷ 51.ಸಾವಿರ ರೂಗಳಿಗೆ ಮಾರಾಟವಾಗಿವೆ ಎಂದು ಹೇಳಿದರು. 

ಆದ್ದರಿಂದ ಸೋಮವಾರ ಸಂಜೆ ಗ್ರಾಮದಲ್ಲಿ ಎರಡು ಹೋರಿಗಳನ್ನು ಸಕಲವಾದ್ಯಗಳೊಂದಿಗೆ ಝಾಂಜ ಪಥ ಹಾಗೂ ಡೊಳ್ಳೂ ಕುಣಿತಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೇಲೆ ಭವ್ಯ ಮೆರವಣಿಗೆ ಮಾಡುತ್ತಾ ಹೋರಿಗಳನ್ನು ಬಿಳ್ಕೂಡಲಾಯಿತು 

ಈ ಸಂದರ್ಭದಲ್ಲಿ  ಹೋರಿಗಳ ಬಳಗದ ಅಭಿಮಾನಿಗಳು ಮತ್ತು ಆನಂದ ಸುಳ್ಳನ್ನವರ ಈಶ್ವರ ಮುಗಳಖೋಡ ಮಹಾಲಿಂಗ ಮುಗಳಖೋಡ ಶಿವನಪ್ಪ ಗೌರಾಣಿ ಮಲ್ಲಪ್ಪ ಮುಗಳಖೋಡ ಪುಂಡಲೀಕ ಗೌರಾಣಿ ಶ್ರೀಶೈಲ ಮುಗಳಖೋಡ ಲಕ್ಷ್ಮಣ ಮರಾಠೆ ಸಿದ್ದಪ್ಪ ಗೌರಾಣಿ ಅಜಪ್ಪ ಅರಬಾವಿ ಅಶೋಕ ಹಾರುಗೇರಿ ಆನಂದ ಅರಬಾವಿ ಕರೆಪ್ಪ  ಹಿಡಕಲ ನಾರಾಜ ಗೌರಾಣಿ ಹಾಗೂ ರೈತ ಬಾಂದವರು ಉಪ್ಪಸ್ಥತಿರಿದ್ದರು.