ಹೊನ್ನೂರವಲಿಗೆ ಅಧಿಕಾರ ಹಸ್ತಾಂತರ

Handover of power to Honnuravali

ಕಂಪ್ಲಿ 10: ಕಂಪ್ಲಿ ಗೃಹ ರಕ್ಷಕದಳದ ಘಟಕಾಧಿಕಾರಿಯಾಗಿ ನೇಮಕಗೊಂಡ ಕೆ.ಹೊನ್ನೂರವಲಿ ಇವರಿಗೆ ಹಿಂದಿನ ಘಟಕಾಧಿಕಾರಿಯಾಗಿದ್ದ ಹೆಚ್‌.ಗಿರಿಧರ ಇವರು ಅಧಿಕಾರ ಹಸ್ತಾಂತರಿಸಿದರು.  

ನಂತರ ಹೊನ್ನೂರವಲಿ ಮಾತನಾಡಿ, 2004ರಲ್ಲಿ ಗೃಹ ರಕ್ಷಕದಳದಲ್ಲಿ ಸೇವೆಗೆ ನಿಯೋಜನೆಗೊಂಡು, ಸತತ 21 ವರ್ಷ ಸೇವೆ ಸಲ್ಲಿಸುತ್ತಾ ಬರಲಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಜತೆಗೆ ಅಮೂಲ್ಯ ಸೇವೆ ಸಲ್ಲಿಸಲಾಗುತ್ತಿದೆ. ಸಿಬ್ಬಂದಿಗಳ ಸಹಕಾರದೊಂದಿಗೆ ಉತ್ತಮವಾಗಿ ಸೇವೆ ಸಲ್ಲಿಸಲಾಗುವುದು. ಹೆಚ್‌.ಗಿರಿಧರ ಇವರು ಎರಡ್ಮೂರು ವರ್ಷ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅವರನ್ನು ಸಲಹೆದಂತೆ ಮುಂದಿನ ಸೇವೆಗೆ ಅಣಿಯಾಗುವೆ ಎಂದರು. ಈ ಸಂದರ್ಭದಲ್ಲಿ ಲೀಡರ್ ಕೆ.ಸುರೇಶ ಹಾಗೂ ಸಿಬ್ಬಂದಿ ಇದ್ದರು. 

ಮೇ.02: ಹೆಚ್‌.ಗಿರಿಧರ ಇವರು ನೂತನ ಘಟಕಾಧಿಕಾರಿ ಕೆ.ಹೊನ್ನೂರವಲಿಗೆ ಅಧಿಕಾರ ಹಸ್ತಾಂತರಿಸಿದರು.