ಲೋಕದರ್ಶನ ವರದಿ
ಮೂಡಲಗಿ 25: ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆಲ ಸಂಘಟನೆ ಹಾಗೂ ನಕಲಿ ಪತ್ರಕರ್ತರು ಸಕರ್ಾರಿ ನೌಕರರ, ಸಾರ್ವಜನಿಕರು, ಆಸ್ಪತ್ರೆಗಳು, ಶಾಲಾ ಶಿಕ್ಷಕರ ಮತ್ತು ಅಂಗನವಾಡಿ ಕಾರ್ಯಕತರ್ೆಯರನ್ನು ಹೆದರಿಸಿ ಅವರ ಬಳಿ ಹಣ ವಸೂಲಿ ಮಾಡುತ್ತಿರುವುದು ಪೋಲಿಸ್ ಇಲಾಖೆಯ ಗಮನಕ್ಕೆ ಬಂದಿದ್ದು ಇಂತಹ ಕೃತ್ಯ ಎಸಗುವವರು ಕಂಡುಬಂದಲ್ಲಿ ನಿದರ್ಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಡಿ.ಟಿ ಪ್ರಭು ಹೇಳಿದರು.
ಅವರು ಶುಕ್ರವಾರ ಸಂಜೆ ಪೋಲಿಸ್ ಠಾಣಾ ಆವರಣದಲ್ಲಿ ಅಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಸಂಘಟನೆಗಳು ಸಮಾಜದ ಸುಧಾರಣೆಯ ಜೊತೆಗೆ ಜನರ ಹಿತಶಕ್ತಿಗಾಗಿ ಕೆಲಸ ಮಾಡಬೇಕು ಅದನ್ನು ಬಿಟ್ಟು ಹಣ ವಸೂಲಿಗೆ ಇಳಿದಿರುವುದು ದುರಂತ ಸಂಗತಿಯಾಗಿದೆ. ಇದರ ವಿರುದ್ದ ಸಾರ್ವಜನಿಕರು ಧ್ವನಿ ಎತ್ತಿದಾಗ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯವಿದೆ. ಈ ತರಹ ಹಣ ವಸೂಲಿ ಮಾಡುವ ಸಂಘಟನೆಯ ಮತ್ತು ನಕಲಿ ಪತ್ರಕರ್ತರ ಅವರ ವಿರುದ್ದ ದೂರು ದಾಖಲಿಸುವ ಧೈರ್ಯವನ್ನು ಸಾರ್ವಜನಿಕರು ಮಾಡಬೇಕು. ಪೋಲಿಸ್ ಇಲಾಖೆಯೂ ಇಂತವರ ವಿರುದ್ದ ಕಾರ್ಯಚರಣೆ ಕೈಗೊಂಡಿದೆ. ಅಲ್ಲದೇ ತಾಲೂಕಿನ ಯಾವುದೇ ಸಕರ್ಾರಿ ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ ಏಕಾಏಕಿಯಾಗಿ ಪ್ರತಿಭಟನೆ ಮಾಡುವ ಅವಕಾಶ ಇರುವುದಿಲ್ಲ ಪ್ರತಿಭಟನೆ ನಡೆಸುವವರು 7ದಿನಗಳ ಮುಂಚಿತವಾಗಿ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಕೆಲ ಕಛೇರಿಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಅಲ್ಲಿ ಪ್ರತಿಭಟನೆ ನಡೆಸುವುದರಿಂದ ಸಾರ್ವಜನಿಕ ಕೆಲಸಕ್ಕೆ ತೊಂದರೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ತಾಲೂಕು ದಂಡಧಿಕಾರಿಗಳು ಪ್ರತಿಭಟನೆಗೆ ಸ್ಥಳ ನಿಗದಿ ಪಡಿಸುವ ತನಕ ಸಾರ್ವಜನಿಕರು ಇಲಾಖೆಗೆ ಸಹಕರಿಸಿ ಎಂದು ಹೇಳಿದರು.
ತಾಲೂಕು ದಂಡಧಿಕಾರಿ ಡಿ.ಜಿ. ಮಾಹತ ಮಾತನಾಡಿ, ಪೋಲಿಸ್ ಇಲಾಖೆಡ ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ನಾವು ಕಾನೂನಿನ ಚೌಕಟ್ಟಿನ ಒಳಗೆ ಜೀವನ ನಡೆಸಬೇಕು. ನಾವು ಕಾನೂನು ಪಾಲಿಸುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಜನತೆಗೂ ತಿಳಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಮಾತನಾಡಿ, ನಾಯಕತ್ವ ಗುಣ ಬೆಳೆಸುವವನಿಗೆ ತಾಳ್ಮೆಯ ಅವಶ್ಯವಿದೆ.ಹೋರಾಟದಿಂದ ಮಾತ್ರ ಫಲ ಸಿಗುತ್ತದೆ ಎನ್ನುವುದು ಭ್ರಮೆ, ಸಾಮರಸ್ಯದಿಂದ ಮಾತ್ರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಸಾವಧಾನದಿಂದ ಏನುಬೇಕಾದರೂ ಪಡೆದುಕೊಳ್ಳಬಹುದು. ಕಾನೂನು ಮತ್ತು ಹೋರಾಟ ಒಂದೇ ಸಮಾನವಾಗಿರಲಿ ಎಂದು ಹೇಳಿದರು.
ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಸಾರ್ವಜನಿಕರು, ಸಂಘಟನೆಗಳು ಸಕರ್ಾರಿ ನೌಕರರ ತಪ್ಪನ್ನು ತಿದ್ದುವುದು ಅವರ ಕರ್ತವ್ಯ ಆದರೆ ಅವರನ್ನು ಹೆದರಿಸಿ ಅವರಿಂದ ಹಣ ಪಡೆಯುವುದು ಅಪರಾಧವಾಗಿದೆ. ಅವರ ಕರ್ತವ್ಯಲೋಪ ಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಿ ಅವರು ಕ್ರಮಕೈಗೊಳ್ಳುತ್ತಾರೆ ಅದನ್ನು ಬಿಟ್ಟು ಅವರನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಘಟನೆಗಳು ಕಾನೂನು ಬದ್ದವಾಗಿ ಪ್ರತಿಭಟನೆ ಮಾಡಬೇಕು ಕಾನೂನುಬಾಹಿರ ಚಟುವಟಿಕೆ ಮಾಡಿದ್ದಲ್ಲಿ ರೌಡಿಶೀಟರ್ ಪ್ರಕರಣ ದಾಖಲಿಸಲಾಗುವುದು. ಪತ್ರಕರ್ತರು ಸಹ ತಮ್ಮ ಪತ್ರಿಕಾ ಕಛೇರಿಯ ಗುರುತಿನ ಚೀಟಿ ಹೊಂದಿರುವುದು ಅವಶ್ಯವಾಗಿದೆ ವಾರ್ತ ಮತ್ತು ಪ್ರಚಾರ ಇಲಾಖೆಯಲ್ಲಿ ನೊಂದಾವಣೆ ಇಲ್ಲದ ನಕಲಿ ಪತ್ರಕರ್ತರ ವಿರುದ್ದವೂ ದೂರು ದಾಖಲಿಸಲಾಗುವುದು. ಪಟ್ಟಣದಲ್ಲಿ ಮುಂಜಾನೆ 5 ಗಂಟೆಗೆ ಮದ್ಯದಂಗಡಿಗಳು ಪ್ರಾರಂಭಿಸುತ್ತಿದ್ದಾರೆ ಎಂಬ ದೂರು ಕೂಡ ಬಂದಿದ್ದು ಅಂತಹ ಮದ್ಯದಂಗಡಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿ.ಎಸ್.ಐ ಮಲ್ಲಿಕಾಜರ್ುನ ಸಿಂಧೂರ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎ. ನಾಡಗೌಡರ ಸೇರಿದಂತೆ ಪುರಸಭೆ ಸದಸ್ಯರು, ಸಂಘಟನೆಯ ಪದಾಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.