ಆರೋಗ್ಯ ಸಂಪತ್ತು ಎಲ್ಲಕ್ಕಿಂತ ದೊಡ್ಡದ್ದು: ಶಿವಾನಂದ ಶಿರಗಾಂವಿ
ಚಿಕ್ಕೋಡಿ 20: ಆರೋಗ್ಯ ಸಂಪತ್ತು ಎಲ್ಲಕ್ಕಿಂತ ದೊಡ್ಡದ್ದು, ಎಲ್ಲ ಕೂಲಿಕಾರ್ಮಿಕರು ಆರೋಗ್ಯದ ಮಹತ್ವವನ್ನು ಅರಿತುಕೊಂಡು ಕೆಲಸ ಮಾಡಬೇಕೆಂದು ನರೇಗಾ ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು. ಮದುಮೇಹ, ರಕ್ತದೊತ್ತಡ, ತೂಕ, ಶಿತ, ಜ್ವರ ಪರಿಕ್ಷೀಸಬೇಕಿದ್ದು ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ತಾಲೂಕಾ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸನ್ 2025-26ನೇ ಸಾಲಿನ ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಕೂಲಿ ಕೆಲಸದಲ್ಲಿ ಶೇ 30ಅ ರಷ್ಟು ರಿಯಾಯಿತಿಯನ್ನು ನೀಡಲಾಗಿದ್ದು, ವಿಶೇಷ ಚೇತನರು, ಹಿರಿಯ ನಾಗರಿಕರು, ಗರ್ಭಿಣಿ, ಬಾಣಂತಿಯರಿಗೆ ಕೂಲಿ ಕೆಲಸದಲ್ಲಿ ಶೇ 50ಅ ರಷ್ಟು ರಿಯಾಯಿತಿ ನೀಡಿದ್ದು ಪ್ರಶಸ್ತ ಕೂಲಿ ದರ 370 ರೂ ಇದ್ದು, ನರೇಗಾ ಯೋಜನೆ ನಿಮ್ಮಿಂದ ಹೆಚ್ಚು ಪ್ರಚಾರವಾಗಬೇಕಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಇನ್ಸೂರನ್ಸಗಳ ಹಾಗೂ ಇ-ಶ್ರಮ ಕಾರ್ಡಗಳ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸಲು ದುಡಿಯೋಣಾ ಬಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು 36 ಗ್ರಾಮ ಪಂಚಾಯತಿಗಳಲ್ಲಿ ಆರೋಗ್ಯ ಶಿಭಿರಗಳನ್ನು ಹಮ್ಮಿಕೊಂಡು ನರೇಗಾ ಯೋಜನೆಯ ಪ್ರಚಾರವನ್ನು ಮಾಡಲಾಗುತ್ತಿದೆ ಎಂದರು.
ಐ.ಇ.ಸಿ ಸಂಯೋಜಕರಾದ ರಂಜೀತ ಕಾರ್ಣಿಕ ಮಾತನಾಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಬಡವರ ಜೀವನದ ಸಂಜಿವಿನಿಯಾಗಿದ್ದು ತಾಲೂಕಿನಲ್ಲಿ ಅತಿ ಹೆಚ್ಚು ಮಹಿಳೆಯರು ಕೂಲಿ ಕೆಲಸ ಮಾಡುತ್ತಿದ್ದು, ಕಾಮಗಾರಿ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ವಿರೇಂದ್ರ ಪಾಟೀಲ, ಪಿ.ಡಿ.ಓ ವಿನೋದ ಆಸೋದೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಅಬುಬಕ್ತರ ನದಾಪ್, ಮಲ್ಲಿಕಾರ್ಜುನ ನೇಸರಗಿ, ಕಾಶವ್ವಾ ಅಂಬೇವಾಡಿ, ತಾಲೂಕಾ ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ತಾಂತ್ರಿಕ ಸಹಾಯಕ ಉದಯಕುಮಾರ ಒಡೆಯರ, ಬಿ.ಎಪ್.ಟಿ ಮುತ್ತೆಪ್ಪಾ ಯಾದಗುಡೆ, ಗ್ರಾಮ ಕಾಯಕ ಮಿತ್ರ ಆರತಿ ಧನವಡೆ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.