ಬೆಳಗಾವಿ: ಅತಿವೃಷ್ಠಿ ಸಂತ್ರಸ್ತ ಕಡು ಬಡವರಿಗೆ ಸಹಾಯ

ಲೋಕದರ್ಶನ ವರದಿ

ಬೆಳಗಾವಿ 20:  ಒನ್ ನೇಷನ್ ಯುಥ್ ಸಂಸ್ಥೆ ವತಿಯಿಂದ ಕಳೆದ 12 ದಿನಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪ್ರವಾಹದಿಂದ ಅವಘಡಕ್ಕೊಳಗಾದ ಕುಟುಂಬಗಳಿಗೆ ನಮ್ಮ ಸಂಸ್ಥೆಯಿಂದ ಅಳಿಲು ಸೇವೆಯವನ್ನು ಒದಗಿಸಲಾಯಿತು.  

ಪ್ರಶಾಂತಿ ಬಾಲ ಮಂದಿರ ಟ್ರಸ್ಟ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸುಮಾರು 50 ರಿಂದ 60 ಸ್ವಯಂ ಸೇವಕರು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗಾಗಿ ಅವಿರತವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು, ಗೋಕಾಕ, ಅರಭಾಂವಿ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲ್ಲೂಕಿನ 40ಕ್ಕೂ ಅಧಿಕ ಹಳ್ಳಿಗಳಲ್ಲಿ ನೆರೆ ಪೀಡತರಾದ, ಆಥರ್ಿಕವಾಗಿ ಕಡು ಬಡತನದ ಬೇಗೆಯಿಂದ ನೊಂದ 2000 ಕುಟುಂಬಗಳಿಗೆ 1 ತಿಂಗಳಿಗಾಗುವಷ್ಟು ಕಿರಾಣಿ ಮತ್ತು ದಿನನಿತ್ಯದ ಸಾಮಗ್ರಿಗಳನ್ನು ವಿತರಿಸಲಾಯಿತು. 

10 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಹಿಟ್ಟು, 5 ಕೆ.ಜಿ. ಬೆಳೆ, 2ಲೀ. ಎಣ್ಣೆ, ಉಪ್ಪು, ಜಿರಗೆ, ಸಾಸಿವೆ, ಮಸಾಲೆ ಮತ್ತು ಖಾರ, ಮೆಣಸು, ಜಮಖಾನೆ, ಹೊದಿಕೆ, ರೇನ್ ಕೋಟ, ಟುಥ್ ಬ್ರಶ್ & ಪೆಸ್ಟ್, ಒಳ ಉಡುಪು, ಜ್ಯೂಸ್ ಪಾಕೇಟ, ಟಾರ್ಪಲಿನ್ ಜೊತೆಗೆ ಸ್ಯಾನಿಟರಿ ನ್ಯಾಪಕಿನ್ ಒಳಗೊಂಡ 20ಕ್ಕೂ ಅಧಿಕ ಪದಾರ್ಥಗಳುಳ್ಳ 2000 ಚೀಲಗಳನ್ನು ವಿತರಿಸಲಾಯಿತು. ಇದರ ಜೊತೆಗೆ  ಸತ್ಯಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾಥರ್ಿಗಳ ಬಳಗದ 5-6 ನುರಿತ ವೈದ್ಯರೊಂದಿಗೆ ಸೇರಿ ಉಚಿತ ವೈದ್ಯಕೀಯ ಸೇವೆಯನ್ನು ಮಾನವೀಯ ನೆಲೆಯಲ್ಲಿ ಒದಗಿಸಿದ್ದೇವೆ. 

ಈ ಸೇವೆಯಲ್ಲಿ ಸಂತೋಷ ಪಾಟೀಲ, ನಾಗರಾಜ ಗಸ್ತಿ, ನಾಗರಾಜ ನಂದಿಹಳ್ಳಿ, ಸೌಮ್ಯ ನಾಯ್ಕ, ಸ್ನೇಹಾ ಈರಣ್ಣವರ, ಅನುರಾಧಾ ಎಂ.ಜಿ., ಕಾಶೀನಾಥ ಗೌಡರ, ಶಿವು ಕಾಗವಾಡ, ಪ್ರತೀಕ್ಷಾ ಮತ್ತು ಅಜಯ ಪಾಟೀಲ ಸೇರಿದಂತೆ ಹಲವಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು.