ಯಮಕನಮರಡಿ 30: ಖಾನಾಪುರ ತಾಲೂಕಿನ ತೋಲಗಿ ಮಠದ ಪೂಜ್ಯರಾದ ಲಿಗೈಕೆ ಕಿರ್ತನ ಕೇಸರಿ ಸೋಮಯ್ಯ ಅಜ್ಜನವರು ನಾಡಿನ ಉದ್ದಕ್ಕೂ ಮೂಲೆ ಮೂಲೆಗಳಲ್ಲಿ ಸಂಚರಿಸಿದವರು, ಈ ವೇಳೆ ಅವರು ಮನುಷ್ಯನ ಸಾರ್ಥಕತೆ ಬದುಕು ಕಟ್ಟಿಕೊಳ್ಳಲು ತಮ್ಮ ಅನುಭವ ನುಡಿಗಳನ್ನು ತಮ್ಮ ಕಿರ್ತನೆ ಪ್ರವಚನ ಮೂಲಕ ಹೆಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಅಂತಹವರ ಸ್ಮರಣೆ ನಿಜಕ್ಕೂ ಸಾರ್ಥಕವಾದದ್ದಾಗಿದೆ ಎಂದು ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಟದ ಪೂಜ್ಯರಾದ ಮಡಿವಾಳ ರಾಜಯೊಂಗೇದ್ರ ಮಹಾಸ್ವಾಮಿಗಳು ಹೇಳಿದರು.
ಅವರು ತೊಲಗಿ ಗ್ರಾಮದ ಶ್ರೀ ಮಠದಲ್ಲಿ ಶುಕ್ರವಾರ ದಂದು ಆಯೋಜಿಸಲಾಗಿದ್ದ ಲಿಂಗೈಕೆ ಕಿರ್ತನ ಕೇಸರಿ ಶ್ರೀ ಸೋಮಯ್ಯ ಮಹಾಸ್ವಾಮಿಗಳ 32 ನೆ ಪುಣ್ಯಾರಾಧನೆ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು ಮನುಷ್ಯನ ಜೀವನ ಪಾವನ ವಾಗಬೆಕಾದರೆ ಗುರುವಿನ ಅನುಗ್ರಹ ಬೇಕು ಅಜ್ಞಾನದಿಂದ ಜ್ಞಾನವೆಂಬ ಬೆಳಕಿಗೆ ತರುವವನೆ ನಿಜವಾದ ಗುರು ಮನುಷ್ಯನು ನೆಮ್ಮದಿ ಜೀವನ ಸಾಗಿಸಬೆಕಾದರೆ ಗುರುಗಳ ಉಪದೇಶ ಆಲಿಸಬೇಕೆಂದು ಹೇಳಿದರು.
ಅದರಂತೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ ಬಿ ಶಿವಪೂಜಿ ಅವರು ಮಾತನಾಡುತ್ತಾ ಮನುಷ್ಯನಿಗೆ ಶಾಂತಿ ಸಮಾಧಾನ ನೆಮ್ಮದಿ ಸಿಗುವುದು ಮಠ ಮಾನ್ಯಗಳಲ್ಲಿ ಮಾತ್ರ ಒಳ್ಳೆಯ ಆಚಾರ ವಿಚಾರ ಸ್ವಾಮಿಗಳ ಉಪದೇಶ ಆಲಿಸಿ ಮನುಷ್ಯನ ಜೀವನದಲ್ಲಿ ಅಳವಡಿಸಿಕೋಳ್ಳುವುದು ಮತ್ತು ನಿತ್ಯ ಯೋಗ ಧ್ಯಾನ ತಪಸ್ಸು ಮಾಡುವುದರಿಂದ ಜನರಲ್ಲಿ ಧಾರ್ಮಿಕ ಮನೋಭಾವನೆ ಬೆಳಸಿಕೊಳ್ಳುವ ಕಾರ್ಯವನ್ನು ಶ್ರೀ ಮಠಗಳು ಮಾಡುತ್ತಿವೆ ಎಂದು ಹೇಳಿದರು. ಅದರಂತೆ ತೋಲಗಿ ಚಿಕ್ಕಲದಿನ್ನಿ ಸೋಮೇಶ್ವರ ಚಿಕ್ಕಮಠದ ಪಿಠಾಧೀಶರಾಧ ಅದೃಶ್ಯಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಟಕ್ಕೂ ತೊಲಗಿ ಸೋಮೇಶ್ವರ ಚಿಕ್ಕಮಠ್ಠಕ್ಕೂ ಅವಿನಾಭವ ಸಂಬಂದವಿದೆ ಲಿಂಗೈಕ ಕಿರ್ತನ ಕೇಸರಿ ಶ್ರೀ ಸೋಮಯ್ಯಾ ಮಹಾಸ್ವಾಮಿಜಿ
ಅವರು ಜಾತಿ ಭೇದ ಮಾಡದೆ ಪ್ರತಿಯೋಂದು ಗ್ರಾಮಕ್ಕೆ ಹೋಗಿ ಕಿರ್ತನೆ ಪ್ರವಚನದ ಮೂಲಕ ಜನರಲ್ಲಿರುವ ಅಜ್ಞಾನವೆಂಬ ಅಂದಕಾರವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನ ಜ್ಯೋತಿ ಬೆಳಗಿಸಿದವರಾಗಿದ್ದಾರೆ ಎಂದು ಹೆಳಿದರು.
ಕಾರ್ಯಕ್ರಮದಲ್ಲಿ ದತ್ತವಾಡದ ಶ್ರೀ ಹೃಷಿಕೆಶಾನಂದ ಮಹಾರಾಜರು ಜಾರಕಿಹೋಳಿ ಗ್ರಾಮದ ಕೃಪಾನಂದ ಮಹಾಸ್ವಾಮಿಗಳು ಕಾದರೋಳ್ಳಿ ರಾಮಮಂದಿರದ ಗುರುಪುತೃ ಮಹಾರಾಜರು ಕುಮಾರ ಮಠದ ರಾಮಣ್ಣಾ ಶರಣರು ಪ್ರವಚನ ನೀಡಿದರು. ಈ ವೇಳೆ ಗುಟಗುದ್ದಿ ಬಾಳಯ್ಯ ಅಜ್ಜನವರ ಮಠದ ಶಿವಾನಂದ ಮಹಾಸ್ವಾಮಿಗಳು ಮತ್ತು ಇಟಗಿ ಟಿಎಸ್‌ಪಿಎಸ್ ಅಧ್ಯಕ್ಷ ವಿಜಯ ಸಾಣಿಕೊಪ್ಪ ಬೋಗುರ ಗ್ರಾ ಪಂ ಅಧ್ಯಕ್ಷ ಚಂದ್ರಗೌಡ ಪಾಟೀಲ ಸದಸ್ಯರಾದ ಇಕ್ಬಾಲ ನಧಾಪ ಸತೀಶ ನಾಯಿಕ ಗಣಪತಿ ನಾಯಿಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಗೋಪಾಲ ಚಪಣಿ ನಿವೃತ್ತ ಸೈನಿಕ ಮೃತ್ಯುಂಜಯ ಹಿರೇಮಠ ಹುಬ್ಬಳ್ಳಿಯ ಅಲ್ಟರೆ್ನಟಿವ ಮಡಿಸಿನ ತಜ್ಞ್ನ ಬಸವರಾಜ ಮ್ಯಾಗೇಡಿ ಐ ಎಮ್ ಸಿ ಕಂಪನಿ ರಾಯಬಾರಿ ಸ್ಟಾರ್ ನಮೃತ ಮಿಲಿಂದ ದೇಸಾಯಿ, ರುಬಿಸಾರ ಪರಶುರಾಮ ಹಿರೋಜಿ, ಇವರುಗಳನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಶಿಕ್ಷಕರಾದ ಎಮ್ ಆರ್ ನಡುವಿನಮನಿ ಸ್ವಾಗತಿಸಿದರು. ಶಿಕ್ಷಕ ವಿವೇಕ ಕುರುಗುಂದ ನಿರೂಪಿಸಿದರು.