ಮುಚ್ಚಂಡಿ ಕೇಂದ್ರದ ಪ್ರತಿಭಾ ಕಾರಂಜಿ ಉದ್ಘಾಟನೆ

ಬೆಳಗಾವಿ 24: ತಾಲೂಕಿನ  ಮುಚ್ಚಂಡಿ ವಲಯ ಮಟ್ಟದ  ಪ್ರತಿಭಾ ಕಾರಂಜಿಯು ಇಂದು ಕಲಕಾಂಬ ಗ್ರಾಮದ ಸರಕಾರಿ ಹಿರಿಯ ಮರಾಠಿ ಶಾಲೆ ಆವರಣದಲ್ಲಿ ಜರುಗಿತು.

ಗ್ರಾಮ ಪಂಚಾಯತ ಉಪಾಧ್ಯಕ್ಷೆ ಅಲ್ಕಾ ಲೋಹಾರ  ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ  ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಭರಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು ಮಕ್ಕಳಲ್ಲಿರುವ  ಪ್ರತಿಭೆಯನ್ನು ಹೊರಹೊಮ್ಮಿಸುವ ನಿಟ್ಟಿನಲ್ಲಿ  ಪ್ರತಿಭಾ ಕಾರಂಜಿಯು ಸಹಾಯಕವಾಗಿದೆ. ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ  ಬೆಳೆಸುವುದರ ಜೊತೆಗೆ ತನ್ನಲ್ಲಿರುವ ಕಲೆಯನ್ನು ಪ್ರದಶರ್ಿಸಲು ವೇದಿಕೆಯಾಗಿದೆ ಎಂದು ಹೇಳಿದರು.

ಶಾಲೆಯ ಸುಧಾರಣೆಗೆ ಶ್ರಮಿಸುತ್ತಿರುವ ಭರಮಾ ಪಾಟೀಲ, ರಾಜು ಪಾಟೀಲ, ಕಲ್ಲಪ್ಪ ಪಾಟೀಲ, ಪಿಂಟು ಪಾಟೀಲ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ  ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ  ಬಿ.ಆರ್.ಸಿ.  ಆರ್. ಬಿ. ಕಮ್ಮಾರ, ಆರ್. ಪಿ. ಗೋಶಾನಟ್ಟಿ ಸೇರಿದಂತೆ ಹಲವು ಗಣ್ಯರು, ಶಾಲಾ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು. 

   ಶಾಲಾ ವಿದ್ಯಾರ್ಥಿ ಯರು ಪ್ರಾರ್ಥಿಸಿದರು. ಪ್ರಧಾನ ಗುರುಮಾತೆ ಎ. ಜಿ. ಬೊಂಗಾಳೆ ಸ್ವಾಗತಿಸಿದರು. ಸಿ.ಆರ್.ಪಿ.  ರುದ್ರಯ್ಯ ಆಯ್. ಮೋಟ್ಯಾಳಮಠ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಸ್ವರೂಪ ವಿವರಿಸಿದರು. ಶಿಕ್ಷಕ ವ್ಹಿ. ಎನ್. ಜೋಶಿ ವಂದಿಸಿದರು.ಶಿಕ್ಷಕ ಎಸ್. ಎ. ಆನಗೋಳಕರ ಕಾರ್ಯಕ್ರಮ ನಿರೂಪಿಸಿದರು.