ಇಂಡಿ 13: ಕೇಂದ್ರ ಸರಕಾರ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಪೌರತ್ವ ಕಾಯ್ದೆಯನ್ನು ಮಂಡಿಸಿ ತಿದ್ದು ಪಡಿ ಮಾಡಿರುವ ಬಿಲ್ ಪಾಸ್ನ್ನು ಈ ಕೂಡಲೆ ತ್ವರಿತವಾಗಿ ಹಿಂಪಡೆಯಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಸಿ ಪಟ್ಟಣದಲ್ಲಿ ಸ್ಥಳಿಯ ಅಂಜುಮನ್ ಇಸ್ಲಾಂ ನೆತೃತ್ವದಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕವಾಗಿ ಭ್ರಹತ ಪ್ರತಿಭಟನೆ ಮಾಡಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಸಿಲ್ದಾರ ಕುಲಕರ್ಣಿಯವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ಶಾಕಿರಹುಸೇನ ಕಾಸ್ಮಿ ಹಾಗೂ ಇಂಡಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ ಕೇಂದ್ರ ಸರಕಾರ ಕೇವಲ ಮುಸ್ಲಿಂ ಸಮುದಾಯವನ್ನು ಕಡೆಗಣಿಸುವ ಉದ್ದೇಶದಿಂದ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಪೌರತ್ವ ಕಾಯ್ದೆಯನ್ನು ಮಂಡಿಸಿದೆ. ಇದರಿಂದ ಕೇವಲ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಈ ಪೌರತ್ವ ಕಾಯ್ದೆಯನ್ನು ತಿದ್ದು ಪಡಿ ಮಾಡಲಾಗಿದೆ. ಯಾವುದೆ ಕಾರಣಕ್ಕೂ ಗೌರಾನ್ವಿತ ಘನವೆತ್ತ ರಾಷ್ಟ್ರಪತಿಗಳು ಮಸುದೆ ಅಂಗಿಕರಿಸದೆ ಈ ಬಿಲ್ ಮರಳಿಸಬೇಕು ಕೂಡಲೆ ಕೇಂದ್ರ ಸರಕಾರ ಕೂಡಾ ಬಿಲ್ ವಾಪಸ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯು ಅಂಜುಮನ್ ಮೈದಾನದಿಂದ ಹೊರಟು ಮಾವಿರ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸಿಲ್ದಾರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಮೌಲಾನಾ ಸಾಜುದ್ದಿನ್, ಅಂಜುಮನ್ ಅದ್ಯಕ್ಷ ಅಯುಬ ಬಾಗವಾನ, ಪ್ರದಾನ ಕಾರ್ಯದರ್ಶಿ ಅಕಿಲ ಹವಾಲ್ದಾರ, ರಶಿದ ಅರಬ, ಖಾಜಾಪಟೇಲ ನಂದ್ರಾಳ, ಜಾವಿದ ಮೋಮಿನ, ಮುತ್ತಪ್ಪ ಪೊತೆ, ಹಮಿದ ಮುಲ್ಲಾ, ಮಹಿಬುಬ ಬೇವನೂರ, ಮುಕ್ತಾರ ಅರಬ, ಅವಿನಾಶ ಬಗಲಿ, ಪ್ರಶಾಂತ ಕಾಳೆ, ಜೆ.ಎಮ್. ಕರ್ಜಗಿ, ಅಬ್ದುಲರಹಿಮಾನ ಅಂತುಲೆ, ರಹಿಸ್ ಅಷ್ಟೆಕರ, ಸೇರಿದಂತೆ ಅನೇಕ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.