ಇಂಡಿ: ಅಭಿವೃದ್ಧಿ ಕಾಮಗಾರಿಗಳಿಗೆ ನೇದಲಗಿಯವರಿಂದ ಗುದ್ದಲ್ಲಿ ಪೂಜೆ

ಲೋಕದರ್ಶನ ವರದಿ

ಇಂಡಿ 14: ಸಾಲೋಟಗಿ ಜಿಲ್ಲಾ ಪಂಚಾಯತ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿಯೊಂದು ಗ್ರಾಮಕ್ಕು ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಇಂಡಿ ತಾಲೂಕಿನಲ್ಲಿಯೇ ಮಾದರಿಯನ್ನಾಗಿ ಮಾಡುತ್ತೇನೆ ಎಂದು ವಿಜಯಪುರ ಜಿ.ಪಂ ಅಧ್ಯಕ್ಷ  ಶಿವಯೋಗೆಪ್ಪ  ನೇದಲಗಿ  ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ 15.00 ಲಕ್ಷ ರೂಪಾಯಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಜಿ.ಪಂ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪ್ರತಿಯೊಂದು ಬೇಡಿಕೆಗಳನ್ನು ಇಡೇರಿಸುತ್ತಾ ಬಂದಿದ್ದೇನೆ. ನೀರಾವರಿ ಸಮಸ್ಯೆ, ಚೆಕ್ಡ್ಯಾಂ ನಿರ್ಮಾಣ, ಗ್ರಾಮದ ಮುಖ್ಯ ರಸ್ತೆಗಳ ಡಾಂಬರೀಕರಣ ಹೀಗೆ ಹತ್ತು ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇಂಡಿ ತಾಲೂಕಿನ ಪ್ರಗತಿ ಏನಾದರೂ ಶುರುವಾಗಬೇಕಾದರೆ ಅದು ಸಾಲೋಟಗಿ ಗ್ರಾಮದಿಂದ ಪ್ರಾರಂಭವಾಗಿದೆ. ತಾಲೂಕಿನಲ್ಲಿ ಬರೀ ಮಾತಿನಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ. ಜಿಲ್ಲಾ ಪಂಚಾಯತಿಯಲ್ಲಿ ಅನುದಾನ ಕಡಿಮೆ ಇದ್ದರೂ ಸಹ ಹಲವಾರು ಅಭಿವೃದ್ದಿಯ ಕೇಲಸ  ಕಾರ್ಯಗಳನ್ನು ಮಾಡುತ್ತಾ ಬಂದಿದ್ದೆನೆ. ನನ್ನ ಕಷ್ಟದ ದಿನಗಳಲ್ಲಿ ನೆರವಾದವರನ್ನು ಎಂದಿಗೂ ಮರೆಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶಂಕ್ರಪ್ಪ ಸರ್ಜಾಪೂರ, ತಾಲೂಕ ಪಂಚಾಯತ ಸದಸ್ಯರಾದ ಜೀತಪ್ಪ ಕಲ್ಯಾಣಿ, ಎ.ಪಿ.ಎಮ್.ಸಿ ಅಧ್ಯಕ್ಷರಾದ ರಾಜುಗೌಡ ಪಾಟೀಲ, ಗ್ರಾ.ಪಂ ಸದಸ್ಯರಾದ ಆದಂ ಅಗರಖೇಡ, ಚನ್ನಪ್ಪ ಪಡಗಾನೂರ, ಸಾಲೋಟಗಿ ಗ್ರಾಮದ ಹಿರಿಯರು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.