ಭಾರತ ಕಾಶ್ಮೀರದಲ್ಲಿ ಬೆಂಕಿಯೊಂದಿಗೆ ಸರಸವಾಡುತ್ತಿದೆ: ಪಾಕ್ ಆರೋಪ

 ಇಸ್ಲಾಮಾಬಾದ್, ಆಗಸ್ಟ್ 25:      ಕಾಶ್ಮೀರಕ್ಕೆ ನೀಡಲಾಗಿದ್ದ  ವಿಶೇಷ ಸ್ವಾಯತ್ತತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತವು ಬೆಂಕಿಯೊಂದಿಗೆ ಸರಸವಾಡುತ್ತಿದೆ  ಎಂದು   ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಆರೋಪ ಮಾಡಿದ್ದಾರೆ.  ಕೆನಡಾದ-ಅಮೇರಿಕನ್ ಮಾಧ್ಯಮ ಸಂಸ್ಥೆಯಾದ ವೈಸ್ ನ್ಯೂಸ್ಗೆ ಶನಿವಾರ ನೀಡಿದ ಸಂದರ್ಶನದಲ್ಲಿ, ಈ ವಿಷಯ ತಿಳಿಸಿದ ಅವರು,  ಭಾರತ ಸರ್ಕಾರವು ತನ್ನ ಸಂವಿಧಾನದ 370 ಮತ್ತು 35-ಎ ವಿಧಿ ಅನ್ವಯ  ನೀಡಿದ್ದ ವಿಶೇಷ ಸ್ಥಾನ ಮಾನ ರದ್ದುಪಡಿಸುವ ಮೂಲಕ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಬಹುದೆಂದು ಭಾವಿಸಿದರೆ ಅದು  ಮೂರ್ಖತನ ಎಂದು ಅವರು  ದೂರಿದರು.  ಭಾರತವು ವಾಸ್ತವವಾಗಿ ಕಾಶ್ಮೀರದಲ್ಲಿ ಸಾಂವಿಧಾನಿಕ ಬದಲಾವಣೆ  ಮೂಲಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದೆ ಇದಕ್ಕಾಗಿ  ಪಾಕಿಸ್ತಾನ ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು. ದಶಕಗಳಲ್ಲಿ ಕಾಶ್ಮೀರ ಕುರಿತು ನಡೆದ ವಿಶ್ವಸಂಸ್ಥೆಯ ಮೊದಲ ಭದ್ರತಾ ಮಂಡಳಿಯ ಸಭೆಯ ನಂತರ ಯಾವುದೇ ಹೇಳಿಕೆ ನೀಡಿಲ್ಲ ಎಂದು ಪಾಕಿಸ್ತಾನ ನಿರಾಶೆಗೊಂಡಿದೆಯೇ ಎಂದು ಕೇಳಿದಾಗ, ಪರಿಸ್ಥಿತಿಯ ಕುರಿತು ಸಾಕಷ್ಟು ಹಿನ್ನೆಲೆ ಚಚರ್ೆಗಳು ನಡೆದಿವೆ ಕಾಶ್ಮೀರ ಸಮಸ್ಯೆಯನ್ನು ಬಹಳ ಸಮಯದ ನಂತರ ಅಂತಾರಾಷ್ಟ್ರೀಯ ಗೊಳಿಸಲಾಗಿದೆ ಎಂದು ಅಲ್ವಿ ಹೇಳಿದರು. ". ಕಾಶ್ಮೀರದ ಕುರಿತು ಭಾರತ ಹಲವು ಸಲ ಭದ್ರತಾ ಮಂಡಳಿಯ ನಿರ್ಣಯಗಳನ್ನು ನಿರ್ಲಕ್ಷಿಸಿದೆ ಮತ್ತು ವಿವಾದವನ್ನು ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆಗೂ  ನಿರಾಕರಿಸಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ಇಮ್ರಾನ್ ಖಾನ್ ಅವರ ಎಚ್ಚರಿಕೆ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಭಾರತ "ಪುಲ್ವಾಮಾ ಮಾದರಿಯ  ಕಾರ್ಯಾಚರಣೆನಡೆಸುವ ಸಾಧ್ಯತೆಯಿದೆ ಎಂದು ಹೇಳಿದರು. "ಆದರೆ ಪಾಕಿಸ್ತಾನವು ಯುದ್ಧ  ಪ್ರಾರಂಭಿಸಲು ಬಯಸುವುದಿಲ್ಲ  ಎಂದು ಅವರು ಹೇಳಿದರು. ಒಂದು ವೇಳೆ ಭಾರತ ಯುದ್ಧವನ್ನು ಬಯಸಿದರೆ  ನಮ್ಮನ್ನು ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು  ಎಂದು ಅವರು ಒತ್ತಿ ಹೇಳಿದರು.