ಇಂದಿರಾ ಕ್ಯಾಂಟೀನ್ ಬಡವರಿಗೆ ವರದಾನ ಶಾಸಕ ಜೆ.ಎನ್‌.ಗಣೇಶ

Indira Canteen is a boon for the poor: MLA J.N. Ganesh

ಕಂಪ್ಲಿ 28. ಇಂದಿನ ದುಬಾರಿ ದಿನಮಾನದಲ್ಲಿಯೂ ಬಡ ಕೂಲಿ ಕಾರ್ಮಿಕರಿಗೆ  ದಿನಗೂಲಿ ಕೆಲಸಗಾರರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಟೀಪನ್ ಮತ್ತು ಊಟ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಬಡವರಿಗೆ ವರವಾಗಿದೆ ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು.

ಸ್ಥಳೀಯ ಹಳೇ ಬಸ್ ನಿಲ್ದಾಣ ಬಳಿಯಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಬುಧವಾರ ಲೋಕಾರೆ​‍್ಣಗೊಳಿಸಿದ ನಂತರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬರವರ ಪರವಾಗಿ ನಿಂತಿದೆ. ಕಂಪ್ಲಿ ಹೃದಯ ಭಾಗದಲ್ಲಿ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗಿದೆ. ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಂತೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಟಿಫಿನ್‌ಗೆ 5 ರೂ. ಊಟಕ್ಕೆ 10 ರೂಪಾಯಿ ನಿಗದಿ ಮಾಡಿದ್ದು, ಇದು ಬಡವರಿಗೆ ಬಹಳಷ್ಟು ಅನುಕೂಲವಾಗಲಿದೆ ಪಟ್ಟಣದಲ್ಲಿ 1ಕೋಟಿ ರೂಪಾಯಿ ವೆಚ್ಚದಲ್ಲಿ ಮಿನಿ ಬಸ್ ನಿಲ್ಧಾಣ ಶೀಘ್ರದಲ್ಲಿ ಭೂಮಿ ಪೂಜೆ ಮಾಡಲಾಗುವದು ಎಂದರು. ತದನಂತರ ಶಾಸಕ ಗಣೇಶ ಇವರು ಉಪ್ಪಿಟ್ಟು, ಕೇಸರಿಬಾತ್ ಉಪಹಾರದ ರುಚಿ ಸವಿಯುವ ಜತೆಗೆ ಜನರಿಗೆ ಉಪಹಾರ ಬಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಉಪಾಧ್ಯಕ್ಷ ಇಟಗಿ ಶರಣಗೌಡ, ಮುಖ್ಯಾಧಿಕಾರಿ ಕೆ.ದುರುಗಣ್ದ, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಸಿ.ಆರ್‌.ಹನುಮಂತ, ವೀರಾಂಜೀನೀಯಲು, ಮೌಲಾ, ಲೊಡ್ಡು ಹೊನ್ನೂರವಲಿ ಸೇರಿದಂತೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಹಾಗೂ ಪುರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.