ದೇವರಹಿಪ್ಪರಗಿ 28: ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರಿಗೆ ವರದಾನವಾಗಿದೆ’ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯ ಸಮೀಪ ಬುಧುವಾರದಂದು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಡಜನತೆಗೆ ಅದರಲ್ಲೂ ವಿದ್ಯಾರ್ಥಿಗಳು, ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಸಹಾಯಕವಾಗಲಿದೆ. ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಳಿತಾಗುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಪಟ್ಟಣದ ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಬಸವರಾಜ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ,ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಕಾಶಿನಾಥ ಜಮಾದಾರ, ಶಾಂತಯ್ಯ ಜಡಿಮಠ, ಪ್ರಕಾಶ್ ಮಲ್ಹಾರಿ, ಮುಖಂಡರುಗಳಾದ ಎ.ಡಿ. ಮುಲ್ಲಾ, ಕಾಶಿನಾಥ ವಡ್ಡೋಡಗಿ, ಭಾಸ್ಕರ್ ಗುಡಿಮನಿ, ಮುನ್ನಾ ಮಳಖೇಡ, ವೀರೇಶ ಕುದರಿ, ಸಂಗನಗೌಡ ಬಿರಾದಾರ, ಗುರುರಾಜ ಆಕಳವಾಡಿ, ಬಸವರಾಜ ದೇವಣಗಾಂವ, ಅರವಿಂದ ನಾಯ್ಕೋಡಿ, ಸೋಮು ದೇವೂರ,ಅಬ್ದುಲ್ ಚೌದರಿ, ಕಲ್ಲನಗೌಡ ಪಾಟೀಲ, ಹಣಮಂತ ತಾಂಬೆ,ಪ.ಪಂ ಕಿರಿಯ ಅಭಿಯಂತರರಾದ ಬಿರಾದಾರ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಎಸ್.ಎಸ್. ಪೂಜಾರಿ, ವಿದ್ಯಾ ಕ್ಯಾಂಟೀನ್ ವ್ಯವಸ್ಥಾಪಕರಾದ ವಿಜ್ಞಾನಕುಮಾರ ಸೇರಿದಂತೆ ಪ.ಪಂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.