ಮೃತ ರೈತನ ಕುಟುಂಬಕ್ಕೆ ಪರಿಹಾರ ಧನ ಮಂಜೂರಾತಿ ಆದೇಶ ಪತ್ರ ವಿತರಣೆ

ಹಾವೇರಿ: ತಾಲೂಕಿನ ಹಾಲಗಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ದಿ.ನಾಗಯ್ಯ ವೀರಯ್ಯ ಮಠಪತಿ  ಅವರ ಪತ್ನಿ ಶ್ರೀಮತಿ ಗಿರಿಜವ್ವ  ನಾಗಯ್ಯ ಮಠಪತಿ ಅವರಿಗೆ ಕೃಷಿ ಇಲಾಖೆ ವತಿಯಿಂದ ಐದು ಲಕ್ಷ ಪರಿಹಾರಧನ ಮಂಜೂರಾತಿ ಆದೇಶ ಪತ್ರವನ್ನು ಇತ್ತೀಚೆಗೆ ವಿತರಿಸಲಾಯಿತು.

ಶಾಸಕರಾದ ನೆಹರು ಚನ್ನಬಸಪ್ಪ ಓಲೇಕಾರ ಅವರು ಮಾತನಾಡಿ, ಸಕರ್ಾರದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಒದಗಿಸಿಕೊಡುವ  ಭರವಸೆ ನೀಡುವ ಮೂಲಕ  ಮೃತ ರೈತನ ಕುಟುಂಬಕ್ಕೆ ಆತ್ಮಸ್ಥ್ಯೆರ್ಯ ತುಂಬಿದರು.

ಬಾಲೇಹೊಸೂರ ಮಠದ ದಿಂಗಾಲೇಶ್ವರ ಮಹಾಸ್ವಾಮೀಜಿ ಅವರು ಪರಿಹಾರ ಆದೇಶಪತ್ರವನ್ನು ನೀಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿದರ್ೇಶಕ ಆರ್.ಕೆ.ಕುಡಪಲಿ, ಹಾಲಗಿ ಗ್ರಾಮದ ಮುಖಂಡರು ಮತ್ತು ರೈತ ಬಾಂಧವರು ಹಾಜರಿದ್ದರು.