ವರದಿ: ಎಂ.ಬಿ. ಘಸ್ತಿ
ಸಂಕೇಶ್ವರ 02: ಪವನ ಕಣಗಲಿ ಫೌಂಡೇಶನ ವತಿಯಿಂದ ಪ್ರತಿವರ್ಷದಂತೆ, ಈ ವರ್ಷವು ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸಂಕೇಶ್ವರದಲ್ಲಿ ಈ ಕಾರ್ಯಕ್ರಮವು ವಿನೂತನವಾಗಿ ನಡೆಯುತ್ತದೆ. ಈ ವಿವಿಧ ಸ್ಪರ್ಧೆಯು 6 ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿವಿಧ ಗಾಳಿಪಟಗಳು ಆಕಾಶದಲ್ಲಿ ತೇಲುತ್ತವೆ, ಈ ಸಂಕ್ರಾಂತಿ ಹಬ್ಬಂದಂದು ಗಾಳಿಪಟದ ಸ್ಪರ್ಧೆಯನ್ನು ಏರಿ್ಡಸಲಾಗುವುದು ಜನವರಿ 12 ರಂದು ಚಿಣ್ಣರ ಚಿತ್ರಕಲೆ ಸ್ಪರ್ಧೆ, ಕನ್ನಡ ಹಾಗೂ ಇಂಗ್ಲೀಷ ಭಾಷಣ ಸ್ಪರ್ಧೆ, ಎಲ್.ಕೆ.ಜಿ ಯಿಂದ 2 ನೇ ವರ್ಗದ ಮಕ್ಕಳಿಗೆ ಬಹಮಾನ ಪ್ರಥಮ ಬಹುಮಾನ 5000/- ದ್ವೀತಿಯ ಬಹುಮಾನ 2000/- ತೃತಿಯ ಬಹುಮಾನ 1000/- ಹಾಗೂ ಭಾಷಣ ಸ್ಪರ್ಧೆ 3 ನೇ ವರ್ಗದವರಿಂದ 6 ನೇ ವರ್ಗದ ಮಕ್ಕಳಿಗೆ ಪ್ರಥಮ ಬಹುಮಾನ 5000/- ದ್ವೀತಿಯ ಬಹುಮಾನ 2000/- ತೃತಿಯ ಬಹುಮಾನ 1000/- ಇರುತ್ತದೆ. ಜನವರಿ 14 ರಂದು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಏರಿ್ಡಸಿದ್ದು 8 ನೇ ವರ್ಗದವರಿಂದ 10 ನೇ ವರ್ಗದ ಮಕ್ಕಳಿಗೆ ಪ್ರಥಮ ಬಹುಮಾನ 10000/- ದ್ವೀತಿಯ ಬಹುಮಾನ 7000/- ತೃತಿಯ ಬಹುಮಾನ 5000/- ಇರುತ್ತದೆ, ಗಾಳಿಪಟ ತಯಾರಿಸುವ ಸ್ಪರ್ಧೆ 7 ವರ್ಗದವರಿಂದ 10 ನೇ ವರ್ಗದವರಿಗೆ ಪ್ರಥಮ ಬಹುಮಾನ 7000/- ದ್ವೀತಿಯ ಬಹುಮಾನ 5000/- ತೃತಿಯ ಬಹುಮಾನ 2000//- ಇರುತ್ತದೆ.
ಈ ಸ್ಪರ್ಧೆಯು ಮಕರ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಪವನ ಕಣಗಲಿ ಫೌಂಡೇಶನ ವತಿಯಿಂದ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್.ಕೆ.ಜಿ. ಯಿಂದ 10 ತರಗತಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಪವನ ಕಣಗಲಿ ಫೌಂಡೇಶನ ವ್ಯವಸ್ಥಾಪಕ ಪವನ ಕಣಗಲಿಯವರು ಈ ಕಾರ್ಯಕ್ರಮದ ಮಾಹಿತಿಯನ್ನು ಲೋಕದರ್ಶನ ಪ್ರತಿನಿಧಿಗೆ ವಿವರಿಸಿದರು.