ಬೀಳಗಿ 01: ತಾಲೂಕಿನ ಕೊರ್ತಿಯಲ್ಲಿ ಶುಕ್ರವಾರ ಗ್ರಾಮ ದೇವತೆ ದ್ಯಾಮವ್ವ ಹಾಗೂ ದುರ್ಗವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ಜಾತ್ರಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ವಿಶೇಷವಾಗಿ 5 ವಾರಗಳ ದಿವಸ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಕೊನೆ ವಾರದ ಶುಕ್ರವಾರ ಬೆಳಗ್ಗೆ 10 ಘಂಟೆಗೆ ಶಕ್ತಿ ದೇವತೆಯರನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು, ಸುಮಾರು 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ಮೂಲಕ, ಹಳೆ ಕೊರ್ತಿ ಕೃಷ್ಣಾ ನದಿಗೆ ತೆರಳಿ ಗಂಗಾ ಸ್ನಾನ ನೆರವೇರುವುದು, ಬಳಿಕ ಘೋರೆ್ಡ ಹಾಗೂ ಶಿರಬೂರ ಮನೆತನದವರಿಂದ ಗ್ರಾಮ ದೇವತೆಯರಿಗೆ ವಿಶೇಷ ಪೂಜೆ, ಹೂವಿನ ಅಲಂಕಾರದೊಂದಿಗೆ ಉಡಿ ತುಂಬುವುದು,
ಸಾಯಂಕಾಲ ಗೋವಿಂದಗೌಡ ಪಾಟೀಲ್ ಮನೆತನದಿಂದ ಹನುಮಾನ ಕಾರ್ತಿಕೋತ್ಸವ ನೇರವೆರುವುದು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವ ಬೃಹತ್ ಮೆರವಣಿಗೆಯಲ್ಲಿ ಕಮತಗಿ ಕಲಾ ತಂಡದಿಂದ ಜೋಗತಿ ಕುಣಿತ, ಅಥಣಿ ತಾಲೂಕಿನ ಸುತ್ತಟ್ಟಿ ಗ್ರಾಮದ ಕಲಾ ತಂಡದ ಜಾಂಜ್ ಮೇಳಗಳ ನೃತ್ಯ ಪ್ರದರ್ಶನ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ಜನಪದ ಕಲಾ ತಂಡಗಳು ಮೆರವಣಿಗಯಲ್ಲಿ ಮಾಲ್ಗೊಳ್ಳಲಿದ್ದು, ಮೆರವಣಿಗೆಯಲ್ಲಿ ಕಲ್ಮೇಶ್ವರ ಯುವಕ ತಂಡದಿಂದ 10 ಕ್ವಿಂಟಲ್ ಭಂಡಾರ ಬಳಸಲಾಗುವುದು, ರಾತ್ರಿ 10ಕ್ಕೆ ಬನಶಂಕರಿದೇವಿ ನಾಟ್ಯ ಸಂಘ ಬಾದಾಮಿ ಇವರಿಂದ ದುಡ್ಡು ದಾರಿ ಬಿಡಿಸಿತು ನಾಟಕ, ಶನಿವಾರ ರಾತ್ರಿ 9ಕ್ಕೆ ( ಸರಿಗಮಪ, ಚೆನ್ನಪ್ಪ ಹುದ್ದಾರ, ಸುರೇಶ ಇಚಗೇರಿ, ಗೋಪಾಲ ಹೂಗಾರ) ಕಲಾಸಿಂಚನ ಮೆಲೋಡಿಯಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.