ಬೀಜಿಂಗ್, ಏಪ್ರಿಲ್ 2,ಜಗತ್ತು ಈಗ ಕೊವಿದ್-19 ವಿರುದ್ಧದ ಯುದ್ಧದಲ್ಲಿದ್ದು, ಈ ಹಿಂದೆ ಎಲ್ಲೂ ಕಂಡು ಬರದಿದ್ದ ಹೊಸ ಕರೋನವೈರಸ್ ನಿಂದ ಹರಡಿದ ಮಾರಕ ರೋಗ 200 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ವಿವಿಧ ದೇಶಗಳಲ್ಲಿ ನವೀಕೃತ ಮಾಹಿತಿ ಕೆಳಕಂಡಂತಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿದ್-19 ನಿಂದ 884 ಜನರು ಸಾವನ್ನಪ್ಪಿದ್ದು, ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವಿನ ಪ್ರಮಾಣವಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ಸಂಜೆ ತಿಳಿಸಿದೆ.ಅಮೆರಿಕದಲ್ಲಿ ಇದುವರೆಗೆ ಕೊವಿದ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,757ಕ್ಕೆ ತಲುಪಿದೆ.ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಕೊವಿದ್-19 ಸೋಂಕಿಗೆ ಲಸಿಕೆಗಳನ್ನು ಪರೀಕ್ಷಿಸಲಾರಂಭಿಸಿದ್ದಾರೆ.ಮೆಲ್ಬೋರ್ನ್‌ನ ನೈರುತ್ಯ ದಿಕ್ಕಿಗೆ 75 ಕಿಲೋಮೀಟರ್ ದೂರದಲ್ಲಿರುವ ಗೀಲಾಂಗ್‌ನಲ್ಲಿರುವ ಆಸ್ಟ್ರೇಲಿಯಾ ಪ್ರಾಣಿ ಆರೋಗ್ಯ ಪ್ರಯೋಗಾಲಯದಲ್ಲಿ (ಎಎಎಚ್‌ಎಲ್) ಮೊದಲ ಹಂತದ ಪರೀಕ್ಷೆಯನ್ನು ಆರಂಭಿಸಲಾಗಿದೆ ಎಂದು ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‍ಒ) ಗುರುವಾರ ಪ್ರಕಟಿಸಿದೆ.
ಕೇಪ್ ಟೌನ್: ದಕ್ಷಿಣ ಆಫ್ರಿಕಾ ದೇಶಾದ್ಯಂತ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದರಿಂದ ಪರೀಕ್ಷೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಬುಧವಾರ ಆ ದೇಶದಲ್ಲಿ ಕೊವಿದ್-19 ಗಾಗಿ ಹತ್ತಾರು ಸಂಚಾರಿ ಮಾದರಿ ಪರೀಕ್ಷೆಗಳ ಘಟಕಗಳಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಯೋಗಾಲಯ 60 ಸಂಚಾರಿ ಮಾದರಿ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಘಟಕಗಳನ್ನು ದೇಶಾದ್ಯಂತ ನಿಯೋಜಿಸಿದೆ. ಈ ಮೂಲಕ ವೈದ್ಯಕೀಯ ಕಾರ್ಯಕರ್ತರು ಕೊವಿದ್-19 ಸೋಂಕು ನಾಗರಿಕರಲ್ಲಿ ಪರೀಕ್ಷಿಸುತ್ತಿದ್ದಾರೆ ಎಂದು ಎಂದು ಆರೋಗ್ಯ ಸಚಿವ ಜ್ವೆಲಿ ಮೈಕಿಜ್ ಹೇಳಿದ್ದಾರೆ.
ರಿಯೊ ಡಿ ಜನೈರೊ: ಬ್ರೆಜಿಲ್ ನ ಜನಸಂಖ್ಯೆಯಲ್ಲಿ ಕೊವಿದ್-19 ಸೋಂಕುಗಳನ್ನು ವ್ಯವಸ್ಥಿತವಾಗಿ ಪತ್ತೆ ಮಾಡುವ ಹೊಸ ಉಪಕ್ರಮವನ್ನು ಬ್ರೆಜಿಲ್ ಸರ್ಕಾರ ಬುಧವಾರ ಅನಾವರಣಗೊಳಿಸಿದೆ.
ಆರೋಗ್ಯ ಸಚಿವಾಲಯ 125 ದಶಲಕ್ಷ ಜನರಿಗೆ (ಜನಸಂಖ್ಯೆಯ ಶೇ 60ರಷ್ಟು) ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಕಾರ್ಯಕ್ರಮ ಇದಾಗಿದೆ.
ವಾಷಿಂಗ್ಟನ್: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸ ಅಂಕಿ-ಅಂಶಗಳ ಪ್ರಕಾರ, ಅಮೆರಿಕ 2 ಲಕ್ಷಕ್ಕೂ ಕ್ಕೂ ಹೆಚ್ಚು ಕೊವಿದ್-19 ಸೋಂಕುಗಳನ್ನು ಹೊಂದಿರುವ ಮೊದಲ ರಾಷ್ಟ್ರವೆನಿಸಿದೆ.ಬುಧವಾರ ಮಧ್ಯಾಹ್ನದ ವೇಳೆಗೆ ಒಟ್ಟು 2,03,608 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 4,476ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯ ನವೀಕರಿಸಿದ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.