ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆ

ಲೋಕದರ್ಶನ ವರದಿ

ಬೆಳಗಾವಿ 18: ದಿ. 17ರಂದು ಶಾಸಕ ಅನಿಲ ಬೆನಕೆ ರವರು ಬೆಳಗಾವಿ ನಗರದ ಶೇರಿ ಗಲ್ಲಿಯಲ್ಲಿ 

ಶುಧ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು. 

ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಶಾಸಕರು ಶೇರಿ ಗಲ್ಲಿಯ ಪಿಂಪಲ್ ಕಟ್ಟಾನಲ್ಲಿ ಸ್ಮಾರ್ಟ ಸಿಟಿ ಅನುದಾನದಡಿಯಲ್ಲಿ ಸ್ಥಳೀಯರ ಬೇಡಿಕೆಗಣುಗುನವಾಗಿ ಹಾಗೂ ನೀರಿನ ಸಮಸ್ಯೆಯನ್ನು ನಿಗಿಸುವ ಸಲುವಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ರೂ. 07.50 ಲಕ್ಷಗಳಲ್ಲಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.

ಶಾಕರೊಂದಿಗೆ ಸ್ಮಾರ್ಟ ಸಿಟಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಭಿಷೇಕ ಮೆಂಡಿಗೇರಿ, ಗುತ್ತಿಗೆದಾರ ಅಭಿನವ ಪಾಟೀಲ, ಮಾಜಿ ಉಪ ಮಹಾಪೌರ ಸತೀಶ ಗೌರಗೊಂಡಾ, ಅಪ್ಪಾಸಾಬ ಬೋಗಾರ, ಕಾರ್ತಿಕ ಚೌಗಲೆ, ಸಾಗರ ಬೋರಗಲ, ಸಿದ್ದಾರ್ಥ ಅಮನಾಜಿ, ಕಿರಣ ಕಲಕುಪ್ಪಿ, ಶಾಸಕರ ಆಪ್ತ ಸಹಾಯಕ ವ್ಹಿ. ಎಮ್. ಪತ್ತಾರ, ಹಾಗೂ ಇತರ ಸ್ಥಳೀಯ ಮುಖಂಡರು ಯುವಕರು ಉಪಸ್ಥಿತರಿದ್ದರು.