ಬೆಳಗಾವಿ 28: ನಗರದ ರಂಗಸಂಪದ ತಂಡದವರು ಜೂ. 2 ಸೋಮವಾರದಂದು ಸಾ. 4 ಗಂಟೆಗೆ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಹತ್ತಿರವಿರುವ ಐ.ಎಂ.ಇ.ಆರ್ ಸಭಾ ಭವನದಲ್ಲಿ ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ, ಲೇಖಕ ಡಾ. ಗುರುರಾಜ ಕರಜಗಿಯವರಿಂದ "ಬದುಕಿನಲ್ಲಿ ಮಾನವೀಯ ಮೌಲ್ಯಗಳು" ವಿಷಯ ಕುರಿತಂತೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಆರಂಭದಲ್ಲಿ ಬೆಳಗಾವಿಯ ಸಮೃದ್ಧ ವಿಕಲ ಚೇತನ ಸಂಸ್ಥೆಯ ಅಂಧ ಮಕ್ಕಳಿಂದ ಸಂಗೀತ ಕಾರ್ಯಕ್ರಮವಿದೆ. ಪಿಯುಸಿ ಕಾಮರ್ಸದಲ್ಲಿ ರಾಜ್ಯಕ್ಕೆ 7 ನೆಯ ಮತ್ತು 8 ನೆಯ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿರುವ ರಂಗಸಂಪದದ ಕಲಾವಿದೆಯರಾದ ಅಂತರಾ ಕುಲಕರ್ಣಿ ಹಾಗೂ ಪೂರ್ವಿ ರಾಜಪುರೋಹಿತ ಇವರನ್ನು ಸನ್ಮಾನಿಸಲಾಗುವುದು.
ಸ್ನೇಹ ಪ್ರಕಾಶನ ಧಾರವಾಡದ ಖ್ಯಾತ ವಾಗ್ಮಿ ಹರ್ಷ ಡಂಬಳ ಅವರು ಉಪಸ್ಥಿತರಿರುವರು. ಉಚಿತ ಪ್ರವೇಶವಿದ್ದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.