ಸಾಹಿತ್ಯಿಕ ಸಂಸ್ಕೃತಿಯು ರಾಷ್ಟ್ರೀಯತೆಯ ವಾದವನ್ನು ಬಿಂಬಿಸುವ ಕಾಯಕವಾಗಿದೆ

ಕೊಪ್ಪಳ 18: ಸಾಹಿತ್ಯಿಕ ಸಂಸ್ಕೃತಿಯು ರಾಷ್ಟ್ರೀಯತೆಯ ವಾದವನ್ನು ಎತ್ತಿ ಹಿಡಿಯುವ ಮತ್ತು ಬಿಂಬಿಸುವ ಕಾಯಕವನ್ನು ಮಾಡುತ್ತದೆ ಎಂದು ಶಿಲ್ಲಾಂಗ್ನ ನಾರ್ಥ ಈಸ್ಟರ್ನ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಪ್ರಾಧ್ಯಾಪಕ ಸೋಮಜ್ಯೋತಿ ಮ್ರಿದಾ ಹೇಳಿದರು.

ಕೊಪ್ಪಳದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಜನವರಿ. 16ರಂದು ಹಮ್ಮಿಕೊಂಡಿದ್ದ ಆಂಗ್ಲ ಅಧ್ಯಯನ ವಿಭಾಗದಲ್ಲಿ ಸಾಹಿತ್ಯಿಕ ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಕುರಿತ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಂತಂತ್ರ ಪೂರ್ವ ಮತ್ತು ನಂತರದ ರಾಷ್ಟ್ರೀಯತೆಯ ಕುರಿತಾದ ಸಾಹಿತ್ಯಿಕ ಸಂಸ್ಕೃತಿಯನ್ನು ಅವಲೋಕಿಸಿದಾಗ ಕೆಲವಾರು ನಾಯಕರುಗಳು ಮಾತ್ರ ಮುನ್ನೆಲೆಗೆ ಬರುತ್ತಾರೆ. ಅವರೊಂದಿಗೆ ಸಾಕಷ್ಟು ಜನರು ತಮ್ಮನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗ್ಯೂ ಸಾಹಿತ್ಯಿಕ ಸಂಸ್ಕೃತಿಯು ಅವರ ಮೇಲೆ ಬೆಳಕು ಚೆಲ್ಲುವಲ್ಲಿ ವಿಫಲವಾಗಿದೆ. ಭಾರತದ ಸಾಹಿತ್ಯಿಕ ಸಂಸ್ಕೃತಿ ಪುರುಷ ಪ್ರಧಾನವಾಗಿದೆ. ಮಹಿಳೆಯರು ಕೂಡ ರಾಷ್ಟ್ರ ನಿರ್ಮಾಣದಲ್ಲಿ ಸರಿಸಮನಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರನ್ನು ಎಲೆ ಮರೆ ಕಾಯಿಯಂತೆ ನೇಪಥ್ಯಕ್ಕೆ ಸರಿಸಲಾಗಿದೆ. ಕಮಲಾದೇವಿ ಚಟ್ಟೋಪಾಧ್ಯಾಯ, ಸುಚಿತಾ ಕೃಪಲಾನಿ, ಬೇಗಂ ರೋಯೇಕಾರಂತಹ ಮುಂತಾದ ಮುಹಿಳಾ ಪ್ರಮುಖರ ಹೆಸರುಗಳು ಮುನ್ನೆಲೆಗೆ ಬಾರದಿರುವುದು ವಿಷಾದನೀಯ ಎಂದು ಅವರು ಹೇಳಿದರು.

ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಬಸವರಾಜ್ ಬೆಣ್ಣಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಜೊತೆ ಜೊತೆಗೆ ಜ್ಞಾನ ಕೌಶಲ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮಾದರಿಯ ಕಾಯರ್ಾಗಾರಗಳು ವಿದ್ಯಾರ್ಥಿಗಳನ್ನು ಸಕಾರಾತ್ಮಕವಾಗಿ ರೂಪಿಸುವಲ್ಲಿ ಸಹಕಾರಿಯಾಗಬಲ್ಲವು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಾಂದ್ ಬಾಷಾ, ವಿವಿಧ ವಿಭಾಗಗಳ ಉಪನ್ಯಾಸಕರುಗಳಾದ ಡಾ. ಗಿರೇಗೌಡ, ಡಾ. ರಂಗನಾಥ್, ಡಾ. ಮುನಿರಾಜು, ಡಾ. ಗೀತಾ ಪಾಟೀಲ್, ಶೃತಿ ದೇಸಾಯಿ, ಶ್ರೀಕಾಂತ್ ಭದ್ರಾಪೂರ್, ವಿಶಾಲಾಕ್ಷಿ, ರವಿಚಂದ್ರ, ಕವಿತಾ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.