ದತ್ತಿದಾನಿಗಳಿಂದ ಅರ್ಥಪೂರ್ಣವಾಗುತ್ತಿವೆ ಸಾಹಿತ್ಯಕ ಕಾರ್ಯಕ್ರಮಗಳು: ಸುಮಾ ಕಿತ್ತೂರ

Literary programs made meaningful by donors: Suma Kitthura

ದತ್ತಿದಾನಿಗಳಿಂದ ಅರ್ಥಪೂರ್ಣವಾಗುತ್ತಿವೆ ಸಾಹಿತ್ಯಕ ಕಾರ್ಯಕ್ರಮಗಳು: ಸುಮಾ ಕಿತ್ತೂರ 

ಬೆಳಗಾವಿ 11:  ದತ್ತಿ ದಾನಿಗಳಿಂದಾಗಿ ಸಾಹಿತ್ಯದ ಕಾರ್ಯಕ್ರಮಗಳು ಸತತವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯುವಂತಾಗಿದೆ ಎಂದು ಸುಮಾ ಕಿತ್ತೂರ ಅವರು ಹೇಳಿದರು. 

ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಹಿಳಾ ಸಂಘಟನೆಗಳು ಬಲವರ್ಧನೆಗೊಂಡಾಗ ಕಾರ್ಯಕ್ರಮಗಳು ಸುಸಜ್ಜಿತವಾಗಿ ನಡೆಸಲು ಸಾಧ್ಯವಾಗಲಿವೆ. ಮಹಿಳೆಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು. 

ದತ್ತಿದಾನಿಗಳಾದ ರತ್ನಪ್ರಭಾ ಬೆಲ್ಲದ, ರಾಜನಂದಾ ಗಾರ್ಗಿ ಮಾತನಾಡಿ ತಮ್ಮ ಹಿರಿಯರ ಸ್ಮರಣೆಗೆ ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದರು. 

ಕಥಾಕಥನ ಸಂಘದ 15 ಕ್ಕೂ ಹೆಚ್ಚು ಸದಸ್ಯೆಯರು ಭಾಗವಹಿಸಿ ಸ್ಥಳದಲ್ಲಿಯೆ ಕಥೆ ರಚನೆ ಮಾಡಿ ವಾಚಿಸಿದರು.  

ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೆದ ಸ್ವಾಗತಿಸಿದರು. ಲಲಿತಾ ಪರ್ವತರಾವ್ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಹಿರಿಯ ಸದಸ್ಯರಾದ ಪ್ರೇಮಾ ತಹಶೀಲ್ದಾರ್, ಲಲಿತಾ ಕೋಪರ್ಡೆ, ನೀಲಗಂಗಾ ಚರಂತಿಮಠ, ಹೇಮಾ ಸುನೋಳ್ಳಿ, ಡಾ.ಆಶಾ ನಾಯಕ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ, ಸುನಂದಾ ಹಾಲಬಾವಿ, ಲಲಿತಾ, ಅನ್ನಪೂರ್ಣ, ಸುನೀತಾ, ಮಮತಾ, ಇಂದಿರಾ, ಪ್ರಧಾನ ಕಾರ್ಯದರ್ಶಿ ಆಶಾ ಯಮಕನಮರಡಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಸುಪ್ರೀಯಾ ದೇಶಪಾಂಡೆ ವಂದಿಸಿದರು. ಸಂಘದ ಸದಸ್ಯರು ಹಾಗೂ ಇತರರು ಇದ್ದರು.