ಲೋಕದರ್ಶನ ವರದಿ
ಕೊಪ್ಪಳ 26: ಮುನಿರಾಬಾದ ಹಾಗೂ ನಗರದ ಇಸಿಐ ಚರ್ಚನಲ್ಲಿ ಕ್ರೀಸ್ ಮಸ್ ಹಬ್ಬದ ಸಂಬ್ರಮಚರಣೆಯಲ್ಲಿ ಪಾಲ್ಗೊಂಡು ಕ್ರೈಸ್ತ ಮತಬಾಂಧವರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಶಾಂತಿ-ಸಹನೆ-ಸತ್ಕಾರ್ಯ ಸೂ ವಿಚಾರಗಳು ಪ್ರತಿಯೊಬ್ಬ ಮನುಸ್ಯನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ಷಮಾ ಗುಣವು ಪ್ರೀತಿಯ ಸಂಕೇತವಾಗಿದೆ. ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದ ಯೇಸು ಪ್ರಭು ನಾವೆಲ್ಲರೂ ಒಂದೇ ಎಲ್ಲರನ್ನು ಪ್ರೀತಿಸೋಣಾ ದ್ವೇಷ, ಅಸೂಯೇ ಅಹಂಕಾರದಿಂದ ಮನುಸ್ಯನು ತನ್ನ ಮನುಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. ಸದಾ ತಾಳ್ಮೆಯಿಂದ ವತರ್ಿಸಿ ಸೌಹರ್ಾದತೆ ಸಹಬಾಳ್ವೆಗೆ ಕೈಜೊಡಿಸಬೇಕು ತಾನು ಮಾಡುವ ಕರ್ಮದಿಂದ ಮನುಸ್ಯನು ಈ ಜಗತ್ತಿಗೆ ಪರಿಚಯಗೊಳ್ಳುವನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತೀಯು ಧಾಮರ್ಿಕ ವಿಚಾರಗಳನ್ನು ಹೊಂದಿ ಸದಾಚಾರದಿಂದ ತಮ್ಮ ಜೀವನ ನಡೆಸಿದಾಗ ಮಾತ್ರ ಪ್ರಭು ಯೇಸುರವರ ತತ್ವಪಾಲಿಸಿದಂತಾಗುತ್ತದೆ. ಮಾನವ ಕುಲದ ಏಳ್ಗೆಗಾಗಿ ತಾವು ಶಿಲುಬಿಗೆ ಏರಿ ಅಮರರಾದ ಯೇಸು ಪ್ರಭುರವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರೂ ಚಾಚು ತಪ್ಪದೆ ಪಾಲಿಸಬೇಕೆಂದು ಕರೆ ನೀಡಿದರು.
ಫಾದರ್ ಜೀ ರವಿಕುಮಾರ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರುಗಳಾದ ಅರುಣ ಅಪ್ಪುಶೆಟ್ಟಿ, ಅಕ್ಬರಪಾಷಾ ಪಲ್ಟನ್, ಅಮರೇಶ ಉಪಲಾಪೂರ, ಯಂಕಪ್ಪ ಹೊಸಳ್ಳಿ, ಚಂದ್ರು ಭಾಗ್ಯನಗರ, ರಮೇಶ ಹೂಗಾರ, ಸದಾನಂದ ಭಾವಿಮನಿ, ದೇವೀಂದ್ರಪ್ಪ, ಶ್ಯಾಮಸುಂದರ್, ಸ್ಯಾಮೇಲ್, ಸ್ಯಾಮಸನ್, ಪರಶುರಾಮ ಭಾಗ್ಯನಗರ ಸೇರಿದಂತೆ ಅನೇಕ ಕ್ರೈಸ್ತ ಮತ ಬಾಂಧವರು ಉಪಸ್ಥಿತರಿದ್ದರು.