ಜಿಪಿಎಲ್ ಪೈನಲ್ ಗೆದ್ದ ಲಕ್ಕಿ ಸ್ಟಾರ್ ತಂಡ

ಲೋಕದರ್ಶನ ವರದಿ

ಘಟಪ್ರಭಾ 17: ಕಳೆದ ಒಂದು ವಾರದಿಂದ ಇಲ್ಲಿನ ಎಸ್ಡಿಟಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಘಟಪ್ರಭಾ ಪ್ರೀಮಿಯಲ್ ಲೀಗ್ ಕ್ರಿಕೇಟ ಪಂದ್ಯಾವಳಿ ಬುಧವಾರ ಮುಕ್ತಾಯಗೊಂಡಿತು. 

ಪೈನಲ್ ಪಂದ್ಯಾದಲ್ಲಿ ಲಕ್ಕಿ ಸ್ಟಾರ್ ತಂಡ ನಾಗಮ್ಮ ತಂಡವನ್ನು 20 ರನ್ನ್ಗಳಿಂದ ಸೋಲಿಸಿ 50ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನ ಪಡೆದ ನಾಗಮ್ಮ ತಂಡ 25 ಸಾವಿರ ನಗದು ಹಾಗೂ ಟ್ರೋಫಿ ಹಾಗೂ ಮೂರನೇ ಸ್ಥಾನವನ್ನು ಮಲ್ಲಾಪೂರ ಬುಲ್ಸ್ ತಂಡ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಬಹುಮಾನವನ್ನು ಅಶೋಕ ಸಾಯುನವರ ಹಾಗೂ ಪ್ರಕಾಶ ಬಾಗೇವಾಡಿ ವಿತರಿಸಿದರು. ಪ್ರಥಮ ಬಹುಮಾನವನ್ನು ಲಖನ್ ಜಾರಕಿಹೊಳಿ, ದ್ವಿತೀಯ ಬಹುಮಾನವನ್ನು ಜಯಶೀಲ ಶೆಟ್ಟಿ, ತೃತೀಯ ಬಹುಮಾನವನ್ನು ಪ್ರಕಾಶ ಡಾಂಗೆ ನೀಡಿದ್ದರು.

    ಕಾರ್ಯಕ್ರಮದಲ್ಲಿ ಪ್ರಕಾಶ ಡಾಂಗೆ, ಘಟಪ್ರಭಾ ಪಿಎಸ್ಐ ಹಾಲಪ್ಪ ವೈ.ಬಾಲದಂಡಿ, ಹನುಮಂತ ಗಾಡಿವಡ್ಡರ, ಸುನೀಲ ನಾಯಿಕ, ನವೀನ ಹೊಸಮನಿ, ರಾಜು ಕಾಡದವರ, ಕುಮಾರ ಪಂಡ್ರೆ, ರಾಜು ಸಂಪಗಾವಿ ಸೇರಿ ಹಲವಾರು ಮುಖಂಡರು ಹಾಜರಿದ್ದರು.ನ ಸ್ಥಳೀಯ ಯುವ ಆಟಗಾರರ ಪ್ರತಿಭೆ ತೋರ್ಪಡಿಸುವ ಸಲುವಾಗಿ ಹಲವಾರು ಸೌಲಭ್ಯಗಳೊಂದಿಗೆ ಕಳೆದ 6 ವರ್ಷಗಳಿಂದ ಈ ಕ್ರಿಕೇಟ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.