ವಿವಿಧ ಕಾಮಗಾರಿಗಳಿಗೆ ಶಾಸಕ ಗಣೇಶ್ ಭೂಮಿ ಪೂಜೆ

ಲೋಕದರ್ಶನವರದಿ 

ಕಂಪ್ಲಿ28 : ತಾಲೂಕಿನ ಮೆಟ್ರಿ ಗ್ರಾಮದ ನೂತನ ಗ್ರಾಪಂ ಕಟ್ಟಡ ಪಕ್ಕದಲ್ಲಿ ಗುರುವಾರ ಪಶು ವೈದ್ಯಕೀಯ ಸೇವೆ ಮತ್ತು ಚಿಕಿತ್ಸಾಲಯ ಇಲಾಖೆಯ ಯೋಜನಡಿಯ, 37ಲಕ್ಷ ರೂ.ಗಳ ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿಮರ್ಾಣ, ಎಸ್ಸಿಪಿ ಟಿಎಸ್ಪಿ ಯೋಜನಡಿಯಲ್ಲಿ ಮೆಟ್ರಿ ಗ್ರಾಮದ ಪ್ರಗತಿಕಾಲನಿಯಲ್ಲಿ 30ಲಕ್ಷ ರೂ.ಗಳಲ್ಲಿ ಹಾಗೂ ಚಿಕ್ಕಜಾಯಿಗನೂರು ಗ್ರಾಮದಲ್ಲಿ 20ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿಮರ್ಾಣ ಕಾಮಗಾರಿಗಳಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು.

ಜಿಪಂ ಸದಸ್ಯೆ ಎಂ.ವೆಂಕಟನಾರಮ್ಮ, ಪ್ರಮುಖರಾದ ನೇಣ್ಕಿ ಗಿರಿ, ಜಗದೀಶ ಮೆಟ್ರಿ, ಗ್ರಾಪಂ ಸದಸ್ಯರು, ಚಿಕ್ಕಜಾಯಿಗನೂರು ಪ್ರಮುಖರಾದ ಶಂಕರಗೌಡ, ಹನುಮಪ್ಪ, ಆನಂದರೆಡ್ಡಿ, ಮರೇಗೌಡ್ರು, ಉಪ್ಪಾರ ಮರೆಣ್ಣ, ಬಿ.ದುರುಗಪ್ಪ ಸೇರಿ ಗ್ರಾಪಂ ಸದಸ್ಯರು, ಮುಖಂಡರು, ಪಿಡಬ್ಲ್ಯೂಡಿ ಎಇ ದೇವರಾಜ, ಪಶು ಆಸ್ಪತ್ರೆ ಪ್ರಭಾರೆ ಸಹಾಯಕ ನಿದರ್ೇಶಕ ಡಾ.ದತ್ತಾತ್ರೇಯ ಶ್ರೇಷ್ಠಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ರಾಜೇಂದ್ರಕುಮಾರ ಕದಂ, ಭೂಸೇನಾ ಇಲಾಖೆಯ ಸೈಟ್ ಇಂಜನಿಯರ್ ಎ.ಲಕ್ಷ್ಮಣ ಇತರರಿದ್ದರು.