ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೌಜಲಗಿ

MLA Kaujalagi inaugurated the Our School, Our Responsibility program

ಯರಗಟ್ಟಿ, 19 : ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಶಾಲೆಗಳ ಹೋಬಳಿ ಮಟ್ಟದ “ನಮ್ಮ ಶಾಲೆ ನಮ್ಮ ಜವಾಬ್ಧಾರಿ” ಕಾರ್ಯಕ್ರಮವನ್ನು ಸವದತ್ತಿ ತಾಲೂಕಿನ  ಕೆ ಪಿ ಎಸ್ ಯಕ್ಕುಂಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು  ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಮಹಾಂತೇಶ ಕೌಜಲಗಿ ಉದ್ಘಾಟಿಸಿ ಮಾತನಾಡಿ  ಅವರು "ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು. ನನ್ನ ಮತಕ್ಷೇತ್ರ ದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಈ ವರ್ಷ ಎಸ್ ಎಸ್ ಎಲ್‌.ಸಿ.ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಬೆಳಗಾವಿ ಜಿಲ್ಲೆಯ ಹೆಸರು ತಂದಿದ್ದು ಸರಕಾರಿ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ನನ್ನ ಶಾಲೆ ನನ್ನ ಜವಾಬ್ದಾರಿ ವಿನೂತನ ಕಾರ್ಯಕ್ರಮ. ಇದರಲ್ಲಿ ಪಾಲಕರು ಶಾಲಾ ಅಭಿವೃದ್ಧಿ ಸಮೀತಿ ಹಳೆಯ ವಿದ್ಯಾರ್ಥಿಗಳು ಹೀಗೆ ಎಲ್ಲರ ಪಾತ್ರ ಮುಖ್ಯ ವಾಗಿದ್ದು.ಸರಕಾರದ ವಿವಿಧ ಯೋಜನೆಗಳನ್ನು ಕೂಡ ದೊರಕಿಸುವಲ್ಲಿ ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸುವ ಮೂಲಕ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.  

ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅವರು “ನಮ್ಮ ಶಾಲೆ ನಮ್ಮ ಜವಾಬ್ಧಾರಿ” ಕಾರ್ಯಕ್ರಮದ  ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕಾಲರ್ಶಿಪ್, ಶೂ ಮತ್ತು ಸಾಕ್ಸ ಮುಂತಾದ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲಾಗುತ್ತಿದೆ ಅದೇ ರೀತಿಯಾಗಿ ಸರಕಾರ ಹಾಗೂ ಅಜೀಂ ಪ್ರೇಮ್ ಜಿ ಪೌಂಡೇಶನ್ನರವರ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಪೂರಕ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದ್ದು ಪೂರಕ ಪೌಷ್ಟಿಕ ಆಹಾರವಾದ ಮೊಟ್ಟೆ, ಬಾಳೆಹಣ್ಣು, ಇವುಗಳ ಸೇವನೆಯ ಮಹತ್ವದ ಕುರಿತು ಹಾಗು ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ಮತ್ತು ರಾಗಿ ಮಾಲ್ಟ ವಿತರಣೆಯ ಮಹತ್ವದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು ಹಾಗೂ ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಪರಿಹಾರ ಬೋದನಾ ಕಾರ್ಯಕ್ರಮದ ಕುರಿತು ತಿಳಿಸಿ  ಕಾರಣ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಗಾಗಿ ಶ್ರಮಿಸಲು ಸಹಕಾರವನ್ನು ನಾವೆಲ್ಲರು ನೀಡಬೇಕೆಂದು ಕೋರಿದರು.  

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ. ಕಾರ್ಯಕ್ರಮದ ಕುರಿತು ಮಾತನಾಡಿ ಸರಕಾರಿ ಶಾಲೆಗಳಲ್ಲಿನ ಕಲಿಕಾ ಗುಣಮಟ್ಟಕ್ಕಾಗಿ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಹಲವಾರು ಮೂಲ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಸಮವಸ್ತ್ರ ಶ್ಯೂ ಸಾಕ್ಸ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರ ಹಾಗೂ ಸ್ಮಾರ್ಟ ಕ್ಲಾಸ ನಡೆಸಲು ಟಿ.ವಿ ಮತ್ತು ಸರಕಾರವು ಇತರೆ  ಕಾರ್ಯಕ್ರಮಗಳನ್ನು ಕೈಗೊಂಡಿರುವ ಕುರಿತು ಪಾಲಕರೊಂದಿಗೆ ಸವಿವರವಾಗಿ ತಿಳಿಸಿ ನೈಜತೆಯನ್ನು ಅರ್ಥೈಸಿಕೊಂಡು ನಾವೆಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕೆಂದು ಪಾಲಕರಿಗೆ  ಮಾರ್ಗದರ್ಶಿ ನುಡಿಗಳನ್ನು ತಿಳಿಸಿದರು. ಚಚಡಿ ಸಿ ಆರ್ ಪಿ ಗಳಾದ  ಆರ್ ಎಸ್ ಮುರಗೋಡ ಇವರು ಎನ್ ಎನ್ ಎಮ್ ಎಸ್ ಎನ್ ಟಿ ಎಸ್ ಸಿ ಪರೀಕ್ಷೆ ಮತ್ತು ಶಿಷ್ಯವೇತನ, ಮರುಸಿಂಚನ, ಇ ಎ ಎನ್ ಕೆ, ದ್ವಿಭಾಷಾ ಮಾಧ್ಯಮ ,ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಬಗ್ಗೆ ಮಾತನಾಡಿದರು ಪ್ರೋತ್ಸಾದಾಯಕ ಸೌಲಭ್ಯಗಳಾದ ಸಮವಸ್ತ್ರ ಶ್ಯೂ, ಪಠ್ಯಪುಸ್ತಕ, ಕಂಪ್ಯೂಟರ್ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಸಾವಿರಾರು ಕೋಟಿ ಅನುದಾನ ಖರ್ಚು ಮಾಡುತ್ತಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಪಾಲಕರ ಹಾಗೂ ಸಭೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಮನವಿ ಮಾಡಿ ಸರಕಾರಿ ಶಾಲೆಗಳ ಬಲವರ್ದನೆಗೆ ಹಾಗೂ ದಾಖಲಾತಿ ಹೆಚ್ಚಿಸಲು ನಾವೆಲ್ಲರು ಶ್ರಮಿಸಿ ಸರಕಾರದ “ನಮ್ಮ ಶಾಲೆ ನಮ್ಮ ಜವಾಬ್ಧಾರಿ” ಕಾರ್ಯಕ್ರಮದ ನೈಜತೆಯನ್ನು ಅರ್ಥೈಸಿಕೊಂಡು ಎಲ್ಲರೂ ಕೆಲಸವನ್ನು ನಿರ್ವಹಿಸೋಣ ಎಂದು ತಿಳಿಸಿದರು. 

ನಂತರ ಪಾಲಕರ ಜೊತೆಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಶ್ರೀ ಶಿವಾನಂದ ಕಂಬಾರ ಹಾಗೂ ಶ್ರೀ ಶಿವಾನಂದ ಸುರಕೋಡ ಅವರು ಸಮೀಕ್ಷಾ ಫಾರ್ಮ್‌ಗಳಿಗೆ ಅವರನ್ನು ಸಂದರ್ಶನ ಮಾಡುವ ಮೂಲಕ ಪಾಲಕರಿಂದ ಮಾಹಿತಿಯನ್ನು ಪಡೆದುಕೊಂಡು ಭರ್ತಿಯನ್ನು ಮಾಡಿದರು.  

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ಎನ್ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ  ಮೈತ್ರಾದೇವಿ ವಸ್ತ್ರದ ಪದವಿ ಪೂರ್ವ ಕಾಲೇಜು ಯಕ್ಕುಂಡಿ ಪ್ರಾಚಾರ್ಯರಾದ  ಎ ಎಮ್ ಮಿರಜಕರ. ಕೆ ಪಿ ಎಸ್ ಯಕ್ಕುಂಡಿ ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆಯರಾದ ವಿಜಯಲಕ್ಷ್ಮಿ ಎಸ್ ಗದ್ದಿಗೌಡರ.  ಸಿ.ಆರ್‌.ಪಿ.ಗಳಾದ  ಎಸ್ ಎಸ್ ಮಲ್ಲನ್ನವರ, ಎಮ್ ಜಿ ಬಾಳೆಕುಂದರಗಿ, ಎಮ್ ಎಮ್ ಬೊಳೆತ್ತಿನ, ಆರ್ ಎಸ್ ಮುರಗೋಡ,ಎನ್ ಬಿ ಪೆಂಟೆದ , ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ  ಡಿ ಎಲ್ ಭಜಂತ್ರಿ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಸರ್ವೆ ನಮೂನೆಗಳನ್ನು ತುಂಬುವ ಸಂಪನ್ಮೂಲ ವ್ಯಕ್ತಿಗಳಾದ   ಶಿವಾನಂದ ಕಂಬಾರ  ಹಾಗೂ ಶಿವಾನಂದ ಸುರಕೋಡ ಹಾಗೂ ಪಾಲಕ ಬಂಧುಗಳು, ಹಳೆಯ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಅಧ್ಯಕ್ಷರುಗಳು.ಸದಸ್ಯರು ಮತ್ತು ಗ್ರಾಮ ಪಂಚಾಯಿತಿಯ  ಸದಸ್ಯರು, ಹಾಗೂ ವಿವಿಧ ಶಾಲೆಗಳ ಮುಖ್ಯ ಗುರುಗಳು, ಪಾಲಕರು ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು, ಅಡುಗೆಯವರು ಉಪಸ್ಥಿತರಿದ್ದರು.  

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತಿಭಾ ವಿವೇಕಿ ನಿರೂಪಿಸಿದರು. ವಿಜಯಲಕ್ಷ್ಮಿ ಗದ್ದಿಗೌಡರ ಸ್ವಾಗತಿಸಿದರು. ಎಸ್‌. ಎಸ್‌. ಮಲ್ಲನ್ನವರ ವಂದಿಸಿದರು