ಗುರ್ಲಾಪೂರ 28: ಪ್ರತಿವರ್ಷದಂತೆ ಈ ವರ್ಷವು ಗ್ರಾಮದ ಮಾರುತಿದೇವರ ಓಕಳಿ ಹಾಗೂ ಬಸವೇಶ್ವರರಥೋತ್ಸವವು ದಿ:29 ರಿಂದ 2 ವರಿಗೆ ಅದ್ದೂರಿಯಾಗಿ ಜರುಗುವದು. ಗುರುವಾರ ದಿ.29ರಂದು ಗ್ರಾಮದ ಮಾರುತಿ ದೇವರ ಮುಂದೆಇರುವ ಓಕಳಿ ಹೊಂಡಕ್ಕೆ ವಿಷೇಶವಾಗಿ ಪೊಜೆ ಸಲ್ಲಿಸಿ ಓಕಳಿ ಹೊಂಡತಗೆದು ಸಣ್ಣಓಕಳಿ ಆಡುವರು.
ಶುಕ್ರವಾರಂದು ಗ್ರಾಮದ ಲಕ್ಷ್ಮಿದೇವಿಗೆ ವಿಷೇಶ ಪೊಜೆಮಾಡಿ ಉಡಿ ತುಂಬಿ ಮಂಗಳಾರತಿ ಮಾಡುವರು ಸಂಜೆಗ್ರಾಮದಲ್ಲಿ ಓಕಳಿ ಆಟವಾಡುವರು, ಶನಿವಾರ ರಂದು ಗ್ರಾಮದ ಮಾರುತಿ ದೇವರಿಗೆ ವಿಷೇಶವಾಗಿ ಪೂಜೆಮಾಡಿ ಬಸವೇಶ್ವವರ ರಥದಲ್ಲಿ ಗೌಡರ ಮನೆಯಿಂದ ಕಳಸಕ್ಕೆ ಪೋಜೆ ಮಾಡಿ ಬಸವೇಶ್ವರ ರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ಕೋಡಿಸುವರ ನಂತರ. ಯುವಕರು ಸೇರಿಕಡೆ ಓಕಳಿ ಆಡುವರುತದನಂತರ ಮಾರುತಿದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಷಣೆ ಮಾಡಿ ಬಸವೇಶ್ವರರಗದ್ದುಗೆಯವರಿಗೆ ಹೋಗಿ ಮಹಾಮಂಗಳಾರತಿ ಮಾಡಿ ಪಲಕ್ಕಿ ಉತಸ್ಸವ ಮರಳಿ ಮಾರುತಿ ದೇವಸ್ಥಾನಕ್ಕೆ ಬರುತ್ತದೆ. ಸೋಮವಾರ ದಿ.2ರಂದು ಬಸವೇಶ್ವರರಗದ್ದುಗೆಗೆ ಮಹಾಅಭಿಷಕ ಜರುಗುವದು.
ಸಂಜೆ 5 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವವು ಮಾರುತಿ ದೇವಸ್ಥಾನದವರಿಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ಬಸವೇಶ್ವರಕ್ಕೆ ತಲಪುವುದು ಈ ಸಮಯದಲ್ಲಿ ಸುಮಂಗಲಿಯರ ಆರತಿ ಸಕಲ ವಾದ್ಯ ಮೇಳ ಕುದರಿಕುಣಿತ ಹಾಗೂ ರೂಪಕಗಳು ಪ್ರದರ್ಶನ ಜರಗುವದು ಎಂದು ಜಾತ್ರಾ ಕಮೀಟಿಯವರು ತಿಳಿಸಿರುತ್ತಾರೆ.