ರನ್ನ ಬೆಳಗಲಿ 01: ಬಾಗಲಕೋಟೆ ಜಿಲ್ಲೆ, ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಬುಧವಾರ ದಂದು ಸಾಯಂಕಾಲ ದಕ್ಷ ಪೊಲೀಸ್ ಅಧಿಕಾರಿ ನಾರಾಯಣ ಬರಮಣಿ ಅವರಿಗೆ ಅವಹೇಳನ ಮಾಡಿದ ಮುಖ್ಯಮಂತ್ರಿಯ ವಿರುದ್ಧ ಪಟ್ಟಣದ ನಾಗರಿಕರು ತೀವ್ರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಪ್ರಕೃತಿ ದಹನ ಮಾಡಿದರು.
ಬಿಜೆಪಿ ಮುಖಂಡರಾದ ಪಂಡಿತ ಪೂಜಾರಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ಸಿನ ಕಾರ್ಯಕ್ರಮದಲ್ಲಿ. ಮುಖ್ಯಮಂತ್ರಿಗಳ ಭಾಷಣದ ನಡುವೆ ಅಲ್ಲಿ ನೆರೆದಿದ್ದ ಸಭಿಕರ ಗುಂಪಿನಲ್ಲಿ ಸಣ್ಣ ಪ್ರಮಾಣ ಗಲಿಬಿಲಿ ಉಂಟಾಗಿ ಸಭೆ ಸ್ವಲ್ಪ ನಿಮಿಷಗಳ ಅಡೆತಡೆಗೊಂಡ ಸಮಯದಲ್ಲಿ. ತಾಳ್ಮೆಯನ್ನು ಕಳೆದುಕೊಂಡ ಮುಖ್ಯಮಂತ್ರಿಗಳು ಅಲ್ಲಿದ್ದ ಭದ್ರತಾ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದ ನಮ್ಮೂರಿನ ಹೆಮ್ಮೆಯ ದಕ್ಷ ನಿಷ್ಠಾವಂತ ಎಸ್ಪಿ ನಾರಾಯಣ ಬರಮನಿ ಅವರನ್ನು ಕರೆದು ಏಕವಚನದಲ್ಲಿ ಸಂಭೋಧಿಸಿ ಬೈದು ಅವರನ್ನು ಹೊಡೆಯುವಂತೆ ಕೈ ನೆವರಿದ ದೃಶ್ಯ ಎಲ್ಲ ಮಾಧ್ಯಮದಲ್ಲಿ ಬಿತ್ತರವಾಗಿದೆ ಈ ಘಟನೆಯಿಂದ ನಮ್ಮೂರಿನ ಗೌರವಕ್ಕೆ ಧಕ್ಕೆ ಉಂಟಾಗಿದೆ. ನಿಷ್ಠಾವಂತ ದಕ್ಷ ಪ್ರಾಮಾಣಿಕ ಅಧಿಕಾರಿಗಳಾಗಿ ಸಮಸ್ತ ರನ್ನ ಬೆಳಗಲಿಯ ಪಟ್ಟಣದ ಪ್ರತಿ ಮನೆಯ ಮಗನಂತಿರುವ ನಮ್ಮ ಸಾಹೇಬರಿಗೆ ಆದಂತ ಅವಮಾನವನ್ನು ನಾವು ಖಂಡಿತವಾಗಿ ಖಂಡಿಸುತ್ತೇವೆ. ತಕ್ಷಣವೇ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಅಧಿಕಾರಿಗೆ ಕ್ಷಮೆ ಕೇಳಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಹೇಳುವುದರ ಮೂಲಕ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಯನ್ನು ಕೂಗಿದರು.
ಮಾಜಿ ಪ. ಪಂ. ಅಧ್ಯಕ್ಷರು, ಹಾಲಿ ಸದಸ್ಯರಾದ ಸಿದ್ದುಗೌಡ ಪಾಟೀಲ ಪೊಲೀಸ್ ಅಧಿಕಾರಿಗಳ ರಕ್ಷಣೆ ಇಲ್ಲದೆ ತಮಗೆ ಅಧಿಕಾರ ನಡೆಸಲು ಸಾಧ್ಯವಿಲ್ಲ. ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ಕೀಳಾಗಿ ಕಾಣಬೇಡಿ. ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ತಕ್ಷಣ ರಾಜೀನಾಮೆ ಕೊಡಿ, ಅದನ್ನು ಬಿಟ್ಟು ಅಧಿಕಾರಿಗಳ ಮೇಲೆ ದರ್ ತೋರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಶ್ರೀರಾಮ್ ಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ರಾಜ್ಯದ ಮುಖ್ಯಮಂತ್ರಿಗಳಾಗಿ ದೇಶದ ಬಗ್ಗೆ ಗೌರವವಿಲ್ಲ ನಿಮಗೆ. ಅಂದಮೇಲೆ ಮುಖ್ಯಮಂತ್ರಿಗಳಾಗಿ ಮುಂದುವರಿಯುವುದು ಎಷ್ಟರ ಮಟ್ಟಿಗೆ ಸರಿ, ಕೂಡಲೇ ರಾಜೀನಾಮೆ ಕೊಡಿ, ಒಮ್ಮೆ ಜಿಲ್ಲಾಧಿಕಾರಿಗೆ ಅವಮಾನ, ಈಗ ದಕ್ಷ ಪೊಲೀಸ್ ಅಧಿಕಾರಿಗೆ ಅಪಮಾನ ಅಧಿಕಾರಿ ವೃಂದಕ್ಕೆ ಗೌರವ ನೀಡದ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೆ ಬೇಡ, ನಿಮ್ಮ ಅಧಿಕಾರ ಕೇವಲ ಐದು ವರ್ಷ ಜನ ಸೇವೆಗೆ ಬಂದ ನೀವು. ನಿಮ್ಮನ್ನು ರಕ್ಷಣೆ ಮಾಡುವ ಅಧಿಕಾರಿಗಳನ್ನು ಕೀಳಾಗಿ ನೋಡುವ ಮುಖ್ಯಮಂತ್ರಿ ಬೇಡವೇ ಬೇಡ ನಮ್ಮ ರಾಜ್ಯಕ್ಕೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಭಾಜಪ ಮುಖಂಡರಾದ ಶಂಕರ ನಾಯಕ ಪೋಲಿಸ ಇಲಾಖೆಯಲ್ಲಿ ಸಿಂಹದಂತೆ ತಮ್ಮ ದಕ್ಷತೆಯನ್ನು ಮೆರೆದ ಅಧಿಕಾರಿಗಳ ಸಾಲಿನಲ್ಲಿ ರನ್ನ ಬೆಳಗಲಿಯ ನಾರಾಯಣ ಬರಮಣಿ ಸಾಹೇಬರು ಮುಂಚೂಣಿಯಲ್ಲಿದ್ದಾರೆ. ಅವರು ಸೇವೆ ಮಾಡಿದ ಪ್ರತಿ ಜಿಲ್ಲೆಗಳಲ್ಲಿ ಅವರದೇ ಆದ ಒಂದು ಛಾಪನ್ನು ಮೂಡಿಸಿದ್ದಾರೆ. ಅತ್ಯುತ್ತಮ ದಕ್ಷ ಅಧಿಕಾರಿಗೆ ತಾವು ಕೈಯನ್ನು ತೋರಿದರೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರು ತಮಗೆ ತಕ್ಕ ಉತ್ತರ ನೀಡುತ್ತಾರೆ. ತಮ್ಮ ವರ್ತನೆಯನ್ನ ಗೌರವಯುತವಾಗಿ ಸ್ವೀಕರಿಸಿದ್ದಾರೆ, ಒಂದು ವೇಳೆ ತಿರುಗಿ ಬಿದ್ದರೆ ನಿಮ್ಮ ಮರ್ಯಾದೆ ಏನಾಗುತ್ತಿತ್ತು ಎಂಬುದನ್ನು ಆತ್ವಾವಲೋಕನ ಮಾಡಿಕೊಳ್ಳಿ ಮುಖ್ಯಮಂತ್ರಿಗಳೇ ಎಂದು ಖಡಕ್ಕಾಗಿ ಎಚ್ಚರಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಪಟ್ಟದ ನಾಗರಿಕರು ಸೇರಿ ಸುಮಾರು ಮೂರ್ ನಾಲ್ಕು ಗಂಟೆಗಳ ಕಾಲ ಮುಧೋಳ ನಿಪ್ಪಾಣಿ ಹೆದ್ದಾರಿಯನ್ನು ಬಂದಮಾಡಿ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.