ಕೊಪ್ಪಳ 01: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಈ ಕಾಯ್ದೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ವತಿಯಿಂದ ಕೊಪ್ಪಳ ನಗರದಲ್ಲಿ ಮೇ. 3 ರಂದು ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮಗುರು ಹಾಗೂ ಯುಸೂಫಿಯ ಮಸೀದಿಯ ಖತೀಬ್ ವ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್‌ಅಹಮದ್‌ಖಾದ್ರಿ ವ ತಸ್ಕಿನಿ ಹೇಳಿದರು,ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ ಮೂಲಭೂತ ಅಂಶಗಳ ವಿರುದ್ಧವಾಗಿ ಮುಸ್ಲಿಮರ ನ್ಯಾಯಯುತವಾದ ಆಸ್ತಿಗಳಾದ ಮಸ್ಟಿದ್, ದರ್ಗಾ, ಈದ್ಗಾ, ಖಬ್ರಸ್ಥಾನಗಳಿಗೆ ದಕ್ಕೆ ಮತ್ತು ಮುಸ್ಲಿಂರ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ವಕ್ಪ್‌ತಿದ್ದುಪಡಿಕಾಯಿದೆ 2025 ಯನ್ನುಜಾರಿ ಮಾಡಿರವಕ್ರಮವು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಕಸಿದುಕೊಳ್ಳುವದಾಗಿದೆ.
ಇದನ್ನು ನಾವು ಬಲವಾಗಿ ಖಂಡಿಸಿ, ಇದರ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇವೆಎಂದರು ಸಮಾಜದ ಮುಖಂಡ ಹಾಗೂ ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್ ಮಾತನಾಡಿವಕ್ಪ್ ಆಸ್ತಿ ಅಂದರೆ ದಾನಿಗಳು ಮುಸ್ಲಿಮ್ ಸಮುದಾಯದ ಸಾಮೂಹಿಕ ಕೆಲಸಗಳಿಗೆ ದಾನ ಮಾಡಿದ ಆಸ್ತಿಗಳು ಸದರಿ ಆಸ್ತಿಗಳನ್ನು ಯಾರುದುರುಪಯೋಗ ಮಾಡಬಾರದುಎಂದು ಸರ್ಕಾರದಅಡಿಯಲ್ಲಿ ಬರುವ ವಕ್ಪ್ ಎಂಬ ಸರ್ಕಾರಿ ಮಂಡಳಿಯಲ್ಲಿ ನೊಂದಣಿ ಮಾಡಲಾಗುತ್ತದೆ ಮತ್ತುಅದರ ನಿರ್ವಹಣೆಯನ್ನು ಮುಸ್ಲಿಮರೆ ಇಸ್ಲಾಂಧರ್ಮದ ಆಚರಣೆಗಳ ಅನುಗುಣವಾಗಿ ಮಾಡುತ್ತಾರೆಇದು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕು ಸಂವಿಧಾನದಆರ್ಟಿಕಲ್ 26 ರ ಪ್ರಕಾರ ಭಾರತದಯಾವುದೇಧರ್ಮೀಯರುತಮ್ಮಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗನ್ನು ಮಾಡಲುತಮ್ಮದೇಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದುಎಂದು ತಿಳಿಸಿದರು.ಮುಸ್ಲಿಮ್ ಸಮಾಜದ ಮುಖಂಡ ಹಾಗೂ ನಗರಕಾಂಗ್ರೆಸ್‌ಅಧ್ಯಕ್ಷ ಎಂ. ಪಾಶಾ ಕಾಟನ್ ಮಾತನಾಡಿ, ಮೇಲ್ನೋಟಕ್ಕೆ ಸೆಕ್ಯುಲಾರ್‌ಕ್ರಮವೆಂದುಕಾಣುವ ಈ ತಿದ್ದುಪಡಿಗಳು ಅನ್ಯಾಕ್ರಮಣದುರುದ್ದೇಶವನ್ನೇ ಹೊಂದಿರುವುದು ಸ್ಪಷ್ಟ, ಏಕೆಂದರೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಕಡ್ಡಾಯ ಮಾಡುವ ಮೋದಿ ಸರ್ಕಾರಅದೇ ನಿರ್ಬಂಧವನ್ನು ಹಿಂದೂ, ಜೈನ, ಸಿಖ್, ಕ್ರಿಸ್ಟಿಯನ್ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಾಹಣೆಗಳಲ್ಲೂ ಆಯಾಧರ್ಮದವರಲ್ಲದವರನ್ನು ಏಕೆ ಕಡ್ಡಾಯ ಮಾಡುವುದಿಲ್ಲ? ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರದ ಕೋಮುವಾದಿ ಪಕ್ಷಪಾತ ಮತ್ತುತಾರತಮ್ಯಎದ್ದುಕಾಣುತ್ತದೆ.ಸ್ವಾತಂತ್ರ್ಯಾ ನಂತರದಲ್ಲಿ 1954 ರಲ್ಲಿ ವಕ್ಪ್‌ಕಾಯಿದೆಯೊಂದುಜಾರಿಯಾಯಿತು.ಅದಾದ ನಂತರದಲ್ಲಿ ಪ್ರಧಾನವಾಗಿ 1995 ರಲ್ಲಿಒಂದು ಸಮಗ್ರವಾದ ವಕ್ಪ್‌ಕಾಯಿದೆಜಾರಿಯಾಯಿತು.ಇದು ಪ್ರಧಾನಕಾಯಿದೆಯಾಗಿದ್ದು ಮೋದಿ ಸರ್ಕಾರ ಈ ಕಾಯಿದೆಗೆಅಮೂಲಾಗ್ರವಾದತಿದ್ದುಪಡಿಯನ್ನುತಂದಿದೆಎಂದು ಹೇಳಿದರು. ಸೈಯದ್ ಫೌಂಡೇಶನ್‌ಅಧ್ಯಕ್ಷ ಹಾಗೂ ಸಮಾಜದಮುಖಂಡರಾದ ಕೆ.ಎಂ.ಸೈಯದ್ ಮಾತನಾಡಿ ಸದರಿಕಾಯ್ದೆತಿದ್ದುಪಡಿ ಮಾಡಿರುವಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸಮಾಜದ ಯುವ ನಾಯಕ ಸಲೀಂ ಮಂಡಲಗೇರಿ ಮಾತನಾಡಿ, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರವು ಮುಸ್ಲಿಂರನ್ನು ಗುರುಯಾಗಿರಿಸಿಕೊಂಡು ಧಮನೀಯ ಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯವಾದುದ್ದು, ಇಂತಹ ಕ್ರಮಗಳು ದೇಶವಾಸಿಗಳ ಭಾವನೆಗಳಿಗೆ ಮಾತ್ರವಲ್ಲ, ಸಂವಿಧಾನದ ಹಕ್ಕು ಕಸಿದುಕೊಳ್ಳುವ ಸರ್ವಾಧಿಕಾರಿಧೋರಣೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ಸಂವಿಧಾನ ಹಾಗೂ ಅದರ ಹಕ್ಕುಗಳನ್ನು ಕಾಪಾಡಿಕೊಳ್ಳಲು ನಾವು ಹೋರಾಟ ನಡೆಸುತ್ತೇವೆ ಎಂದರು.
ಸಂವಿಧಾನ ವಿರೋಧಿ ವಕ್ಪ್‌ತಿದ್ದುಪಡಿಕಾಯಿದೆ 2025 ಜಾರಿ ವಿರೋಧಿಸಿ ಹಾಗೂ ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಮೇ. 3 ಶನಿವಾರಜರುಗುವ ಹೋರಾಟಕ್ಕೆ ಅನೇಕ ಸಂಘ-ಸಂಸ್ಥೆಗಳ, ಮತ್ತು ವಿವಿಧ ಸಮುದಾಯದವರು ಬೆಂಬಲವನ್ನು ನೀಡಿದ್ದಾರೆ, ಸಮಸ್ತ ಮುಸ್ಲಿಂ ಭಾಂಧವರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿಯ ಮುಖಂಡರುಜಂಟಿಯಾಗಿಕರೆ ನೀಡಿದರು. ಈ ಸಂದರ್ಭದಲ್ಲಿಅಂಜುಮನ್‌ಕಮಿಟಿಅಧ್ಯಕ್ಷರಾದಎಂಡಿ ಆಸಿಫ್ ಕರ್ಕಿಹಳ್ಳಿ ,ಸಮಾಜದ ಮುಖಂಡರಾದ ಹಾಗೂ ಕೊಪ್ಪಳ ನಗರಸಭೆ ಸದಸ್ಯರಾದಅಜೀಂಅತ್ತಾರ, ಮಾಜಿ ಸದಸ್ಯರಾದಮಾನ್ವಿ ಪಾಷಾ, ಸಮಾಜದಯುವ ನಾಯಕರದಸಲೀಂ ಅಳವಂಡಿ ಸೈಯದ್ ನಾಸಿರ್ ಕಂಠಿ ಫಕ್ರುದ್ದೀನ್ ಸಾಬ್ ನದಾಫ್, ಅಬ್ದುಲ್‌ಅಜೀಜ್ ಮಾನ್ವಿಕರ್ ಸೇರಿದಂತೆ ಇತರರು ಇದ್ದರು.